ತ್ವಚೆಯ ಆರೈಕೆಗೆ ಕೊಡಬೇಕಾದಷ್ಟೆ ಮಹತ್ವ ದೇಹದೊಳಗಿನ ಭಾಗಗಳ ಕಾಳಜಿಗೂ ಕೊಡಬೇಕು ಎಂಬುದನ್ನು ಬಹುತೇಕ ಬಾರಿ ನಾವು ಮರೆತು ಬಿಡುತ್ತೇವೆ. ಕಿಡ್ನಿಯ ರಕ್ಷಣೆ ಬಹು ದೊಡ್ಡ ಸಂಗತಿ.
ಕಿಡ್ನಿಯ ಆರೋಗ್ಯ ಒಮ್ಮೆ ಕೆಟ್ಟರೆ ಅದನ್ನು ಗುಣ ಪಡಿಸಿಕೊಳ್ಳುವುದು ತುಂಬಾ ಕಷ್ಟ. ಕೆಲವೊಮ್ಮೆ ಅದು ನಮ್ಮ ಪ್ರಾಣಕ್ಕೆ ಕುತ್ತು ತರುತ್ತದೆ. ನಿತ್ಯ 5 ರಿಂದ 6 ಲೀಟರ್ ನೀರು ಕುಡಿಯುವುದು ಬಹಳ ಮುಖ್ಯ. ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುತ್ತಿರಬೇಕು. ಇಲ್ಲವಾದರೆ ಕಿಡ್ನಿಯಲ್ಲಿ ಕಲ್ಲುಗಳು ಆಗುವ ಸಾಧ್ಯತೆ ಹೆಚ್ಚು.
ಕಿಡ್ನಿಯ ಆರೋಗ್ಯಕ್ಕಾಗಿ ಹೆಚ್ಚು ದ್ರವ ಪದಾರ್ಥಗಳು, ಹೆಚ್ಚು ಪೌಷ್ಟಿಕಾಂಶ ಇರುವ ಸೊಪ್ಪು ತರಕಾರಿಗಳ ಸೇವನೆ ಮಾಡಬೇಕು.
ಕ್ಷಾರೀಯ ಗುಣ ಹಾಗೂ ಉಪ್ಪಿನಂತಹ ರುಚಿಯನ್ನೂ ಹೊಂದಿರುವ ಸೋಡಾದಲ್ಲಿ ಸೋಡಿಯಂ ಬೈಕಾರ್ಬನೇಟ್ ಅಂಶವಿದ್ದು, ಇದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಒಂದು ಲೋಟ ನೀರಿಗೆ ಸ್ವಲ್ಪ ಸೋಡಾ ಹಾಕಿ ಅದನ್ನು ದಿನಕ್ಕೆ 2 ರಿಂದ 3 ಬಾರಿ ಕುಡಿದರೆ ಕಿಡ್ನಿಯ ಸಮಸ್ಯೆ ದೂರ ಆಗುತ್ತದೆ. ಇದರ ಜೊತೆಗೆ ಒಂದು ಲೋಟ ನೀರಿಗೆ ಸೋಡಾ ಹಾಗೂ ಉಪ್ಪು ಎರಡನ್ನೂ ಕೂಡ ಸಮ ಪ್ರಮಾಣದಲ್ಲಿ ಬೆರೆಸಿಕೊಂಡು ಕುಡಿಯುತ್ತಾ ಬಂದರೆ ನಮ್ಮ ದೇಹದ ಕಿಡ್ನಿಯಲ್ಲಿ ಇರುವ ಕಲ್ಮಶವನ್ನು ಹೊರ ಹಾಕುತ್ತದೆ.