ಕಾರ್ತಿಕ ಮಾಸ ಹಬ್ಬದ ಋತು. ಈ ತಿಂಗಳಲ್ಲಿ ಹವಾಮಾನದಲ್ಲೂ ಸಾಕಷ್ಟು ಬದಲಾವಣೆಗಳಾಗುತ್ತವೆ. ಮಳೆಗಾಲ ಮುಗಿದು ಚಳಿಗಾಲ ಶುರುವಾಗುತ್ತದೆ. ದೇವರ ಪೂಜೆ, ಆರಾಧನೆ ಜೊತೆ ಈ ತಿಂಗಳಲ್ಲಿ ಆಹಾರದ ಬಗ್ಗೆಯೂ ಹೆಚ್ಚು ಗಮನ ನೀಡಬೇಕಾಗುತ್ತದೆ.
ಉತ್ತಮ ಆರೋಗ್ಯ ಬಯಸುವವರು ಈ ತಿಂಗಳಿನಲ್ಲಿ ಕೆಲ ಆಹಾರದಿಂದ ದೂರವಿರಬೇಕು.
ಭಾರತೀಯರು ಬದನೆಕಾಯಿಯನ್ನು ಇಷ್ಟಪಡ್ತಾರೆ. ಬೇರೆ ಬೇರೆ ಪದಾರ್ಥಗಳನ್ನು ಮಾಡಿ ಸೇವನೆ ಮಾಡ್ತಾರೆ. ಈ ತಿಂಗಳಲ್ಲಿ ಬದನೆಕಾಯಿ ತಿನ್ನುವುದು ಅನೇಕ ಆರೋಗ್ಯಕರ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಈ ಋತುವಿನಲ್ಲಿ ಪಿತ್ತ ಸಂಬಂಧಿ ಕಾಯಿಲೆಗಳು ಕಾಡುತ್ತವೆ. ಬದನೆಕಾಯಿ ಅವುಗಳನ್ನು ಹೆಚ್ಚಿಸುತ್ತದೆ. ಆಯುರ್ವೇದದ ಪ್ರಕಾರ, ಇದು ಹೊಟ್ಟೆ ನೋವು, ಅನಿಲ ಸಮಸ್ಯೆ, ಹುಳಿ ತೇಗನ್ನು ಹೆಚ್ಚು ಮಾಡುತ್ತದೆಯಂತೆ.
ಈ ತಿಂಗಳು ಮೀನು ತಿನ್ನದಿರುವುದು ಆರೋಗ್ಯಕ್ಕೆ ಮಾತ್ರವಲ್ಲ ಧಾರ್ಮಿಕವಾಗಿ ಕೂಡ ಒಳ್ಳೆಯದು. ವಿಷ್ಣುವನ್ನು ಈ ತಿಂಗಳಲ್ಲಿ ಪೂಜಿಸಲಾಗುತ್ತದೆ. ಮೀನು ಅವನ ಅವತಾರವಾಗಿದೆ. ಮತ್ತೊಂದೆಡೆ ವೈಜ್ಞಾನಿಕವಾಗಿ ಹೇಳುವುದಾದರೆ ಬದಲಾದ ಹವಾಮಾನದ. ಈಗಷ್ಟೆ ಮಳೆ ಮುಗಿದಿರುತ್ತದೆ. ನದಿಗಳಲ್ಲಿ ಪ್ರವಾಹ ಮತ್ತು ಮಳೆಯಿಂದಾಗಿ ಕೊಳಕು ನೀರು ಸಂಗ್ರಹವಾಗಿರುತ್ತದೆ. ಮೀನುಗಳು ಈ ಕಲುಷಿತ ನೀರಿನ ಸೋಂಕಿಗೆ ಒಳಗಾಗುತ್ತವೆ. ಅಂತಹ ಸಂದರ್ಭಗಳಲ್ಲಿ ಮೀನು ತಿನ್ನುವಂತಹವರು ಕಾಯಿಲೆಗಳಿಗೆ ಬಲಿಯಾದಂತೆ.
ಹಾಗಲಕಾಯಿ ತಿನ್ನುವುದು, ರಸ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಇದು ವಾಯುವನ್ನು ಹೆಚ್ಚಿಸುತ್ತದೆ. ಈ ಋತುವಿನಲ್ಲಿ ನಮ್ಮ ಆರೋಗ್ಯಕ್ಕೆ ಹಾನಿಕಾರಕ ಕೀಟಗಳು ಹಾಗಲಕಾಯಿಯಲ್ಲಿರುತ್ತವೆ. ಆಯುರ್ವೇದದ ಪ್ರಕಾರ ಇದನ್ನು ಸೇವಿಸುವುದರಿಂದ ಮೊಣಕಾಲು ಮತ್ತು ಕೀಲು ನೋವು ಹೆಚ್ಚಾಗುತ್ತದೆ.