ಕತ್ತುನೋವು ನಮ್ಮನ್ನು ಒಂದಿಲ್ಲೊಂದು ರೀತಿಯಲ್ಲಿ ಕಾಡುವ ಸಮಸ್ಯೆ. ಅದಕ್ಕೆ ಕಾರಣಗಳು ಹಲವಿರಬಹುದು. ಸರಳವಾಗಿ ಅದನ್ನು ಪರಿಹರಿಸುವ ಬಗೆಯನ್ನು ನೋಡೋಣ.
ಆಯುರ್ವೇದ ಮಹತ್ವ ಹೊಂದಿರುವ ಅಶ್ವ ಗಂಧದ ಪುಡಿ ಒಂದು ಚಮಚ ತೆಗೆದುಕೊಳ್ಳಿ. ಅರ್ಧ ಚಮಚ ಎಳ್ಳನ್ನು ಹುರಿದು ಪುಡಿ ಮಾಡಿ. ಒಂದು ಪಾತ್ರೆಯಲ್ಲಿ ಒಂದು ಲೋಟದಷ್ಟು ಹಾಲು ಹಾಕಿ ಕುದಿಸಿ.
ತಣ್ಣಗಾದ ಮೇಲೆ ಒಂದು ಲೋಟಕ್ಕೆ ಹಾಕಿ ಅದಕ್ಕೆ ಅಶ್ವಗಂಧದ ಪುಡಿಯನ್ನು ಹಾಕಿ, ಎಳ್ಳಿನ ಪುಡಿ ಬೆರೆಸಿ ಮಿಶ್ರಣ ಮಾಡಿ. ರುಚಿಗೆ ಬೇಕಾದರೆ ಸ್ವಲ್ಪ ಸಕ್ಕರೆ ಸೇರಿಸಿ.
ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕ್ರಮ ತಪ್ಪದೆ 21 ದಿನಗಳ ಕಾಲ ಕುಡಿಯಬೇಕು. ಈ ಒಂದು ಮನೆಮದ್ದಿನ ಜೊತೆ ಬಿಸಿನೀರಿನಲ್ಲಿ ಕಾಟನ್ ಬಟ್ಟೆಯನ್ನು ಅದ್ದಿ ನೋವಿರುವ ಜಾಗದಲ್ಲಿ ಇಟ್ಟುಕೊಳ್ಳಿ. ನಂತರ ಕತ್ತಿಗೆ ಎಣ್ಣೆಯನ್ನು ಹಚ್ಚಿ 10 ನಿಮಿಷ ಬಿಟ್ಟು ಬಿಸಿ ನೀರನ್ನು ಹಾಕಿ. ಕತ್ತುನೋವು ಕಡಿಮೆ ಆಗುವವರೆಗೂ ಕತ್ತಿಗೆ ಒತ್ತಡ ಕೊಡಬೇಡಿ. ಮೆತ್ತಗಿನ ದಿಂಬನ್ನು ಬಳಸಿ.