ಕಲ್ಲಂಗಡಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಕಲ್ಲಂಗಡಿ ಹಣ್ಣಿನ ಸಿಪ್ಪೆ ಹಾಗೂ ಬೀಜವನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿಯೋಣ.
ಕಲ್ಲಂಗಡಿ ಹಣ್ಣನ್ನು ಕತ್ತರಿಸಿದ ಬಳಿಕ ಉಳಿಯುವ ದಪ್ಪನೆಯ ಬಿಳಿ ಭಾಗವನ್ನು ಪಲ್ಯ ಮಾಡಿ ಸೇವಿಸಬಹುದು. ಇದರಿಂದ ದೇಹಕ್ಕೂ ತಂಪು, ರುಚಿಕರವಾದ ಇವುಗಳಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಕಣ್ಣು ಹಾಗೂ ಹೃದಯ ಆರೋಗ್ಯ ಕಾಪಾಡಲು ಇದು ಬಹಳ ಒಳ್ಳೆಯದು.
ಕಲ್ಲಂಗಡಿ ಸಿಪ್ಪೆಯಲ್ಲಿ ಕಾರ್ಬೋಹೈಡ್ರೇಟ್, ವಿಟಮಿನ್ ಸಿ, ಮೆಗ್ನೀಸಿಯಂ ಮತ್ತು ಪೊಟ್ಯಾಸಿಯಂ ಹೇರಳವಾಗಿದ್ದು ಇದು ಹೃದಯದಲ್ಲಿ ರಕ್ತ ಪರಿಚಲನೆ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ.
ರಕ್ತದೊತ್ತಡ ಹಾಗೂ ತೂಕ ನಿಯಂತ್ರಣಕ್ಕೂ ಇದು ಸಹಕಾರಿ. ಕಲ್ಲಂಗಡಿ ಬೀಜವನ್ನು ಒಣಗಿಸಿ ಪುಡಿ ಮಾಡಿ ಬಳಸುವುದರಿಂದ ಹೃದ್ರೋಗ, ಹಾಗೂ ಕೂದಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇದರಲ್ಲಿ ಕ್ಯಾಲೊರಿಯೂ ಹೇರಳವಾಗಿದ್ದು ಪ್ರೊಟೀನ್ ಹಾಗೂ ವಿಟಮಿನ್ ಬಿಯನ್ನೂ ದೇಹಕ್ಕೆ ಒದಗಿಸುತ್ತದೆ.
ಇದನ್ನು ಹುರಿದು ಅಥವಾ ಮೊಳಕೆ ಬರಿಸಿ ತಿನ್ನುವುದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಇದನ್ನು ಜಗಿದು ತಿನ್ನುವುದರಿಂದ ಜೀರ್ಣಶಕ್ತಿಯೂ ಚುರುಕಾಗುತ್ತದೆ.