ಮಧುಮೇಹಿಗಳೂ ಸವಿಯಬಹುದಾದ ಹಣ್ಣುಗಳಲ್ಲಿ ಕಲ್ಲಂಗಡಿಯೂ ಒಂದು. ಆರೋಗ್ಯದ ದೃಷ್ಟಿಯಿಂದ ಹಲವು ಪ್ರಯೋಜನಗಳನ್ನು ಹೊಂದಿರುವ ಕಲ್ಲಂಗಡಿ ಹಣ್ಣಿನ ಒಳಭಾಗ ಕೆಂಪಗೆ ಕಾಣಬೇಕೆಂದು ರಾಸಾಯನಿಕಗಳನ್ನು ಇಂಜೆಕ್ಟ್ ಮಾಡುತ್ತಾರೆ. ನೀವು ಸೇವಿಸುವ ಹಣ್ಣಿಗೆ ಇಂಜೆಕ್ಟ್ ಆಗಿದೆಯೋ ಇಲ್ಲವೋ ಎಂದು ತಿಳಿಯಲು ಹೀಗೆ ಮಾಡಿ.
ಸಾಮಾನ್ಯವಾಗಿ ಹಣ್ಣುಗಳನ್ನು ಸೂಕ್ಷ್ಮವಾಗಿ ನೋಡಿದಾಗ ಮೇಲ್ಮೈಯಲ್ಲಿ ಸೂಜಿಯಿಂದ ಚುಚ್ಚಿದ ರಂಧ್ರವಿರುತ್ತದೆ. ಅದನ್ನು ನೀವು ಮಾರಾಟಗಾರರಲ್ಲಿ ಕೇಳಿದರೆ ಅವರು ಒಪ್ಪಿಕೊಳ್ಳುವುದಿಲ್ಲ. ಅಂಥ ಹಣ್ಣುಗಳು ಕೊಳ್ಳಬೇಡಿ.
ಹಣ್ಣುಗಳ ಮೇಲೆ ಬಿಳಿ ಹುಡಿ ರೀತಿ ಕಂಡು ಬಂದರೆ ಅಂಥ ಹಣ್ಣುಗಳ ಮೇಲೆ ರಾಸಾಯನಿಕ ಸಿಂಪಡಿಸಿದ್ದಾರೆ ಎಂದೇ ಅರ್ಥ. ಅವುಗಳನ್ನು ಮುಟ್ಟಿದಾಗ ಆ ಹುಡಿ ನಿಮ್ಮ ಕೈಗೆ ಅಂಟುತ್ತದೆ, ಅದನ್ನು ಕೊಳ್ಳದಿರಿ.
ಕಲ್ಲಂಗಡಿ ಹಣ್ಣುಗಳು ಬಲಿತಿದ್ದರೆ ಅದರ ಬೀಜಗಳು ಕೂಡ ಕಪ್ಪು ಬಣ್ಣಕ್ಕೆ ತಿರುಗಿರುತ್ತವೆ. ಬೀಜ ಎಳೆಯದ್ದಾಗಿದ್ದು ಹಣ್ಣು ಮಾತ್ರ ಕೆಂಪು ಬಣ್ಣಕ್ಕೆ ತಿರುಗಿದ್ದರೆ ಅವುಗಳಿಗೆ ಇಂಜೆಕ್ಷನ್ ನೀಡಲಾಗಿದೆ ಎಂಬುದು ನಿಶ್ಚಿತ.