alex Certify ಉಲ್ಲಾಸದಿಂದ ದಿನ ಕಳೆಯಲು ಪ್ರತಿದಿನ ಮಾಡಿ ಧ್ಯಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಲ್ಲಾಸದಿಂದ ದಿನ ಕಳೆಯಲು ಪ್ರತಿದಿನ ಮಾಡಿ ಧ್ಯಾನ

ಧ್ಯಾನ ನಿಮ್ಮ ಆರೋಗ್ಯದ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ. ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ನೀವು ಸದಾ ಖುಷಿಯಾಗಿರುವಂತೆ ಮಾಡುತ್ತದೆ.

ಪ್ರತಿ ದಿನ ಕೇವಲ 20 ನಿಮಿಷ ಮಾಡುವ ಧ್ಯಾನ ನಿಮ್ಮ ಇಡೀ ದಿನ ಉಲ್ಲಾಸದಿಂದ ಕಳೆಯುವಂತೆ ಮಾಡುತ್ತದೆ. ಧ್ಯಾನವನ್ನು ಯಾವ ಸಮಯದಲ್ಲಿಯಾದ್ರೂ ಮಾಡಬಹುದು. ಆದ್ರೆ ಬೆಳಿಗ್ಗೆ ಮಾಡಿದ್ರೆ ಹೆಚ್ಚು ಲಾಭ ಎಂಬುದು ತಜ್ಞರ ಅಭಿಪ್ರಾಯ.

ವಿಜ್ಞಾನಿಗಳ ಪ್ರಕಾರ ಪ್ರತಿದಿನ ಮಾಡುವ ಧ್ಯಾನ ಲೈಂಗಿಕ ಜೀವನವನ್ನು ಸುಧಾರಿಸಲು ನೆರವಾಗುತ್ತದೆಯಂತೆ. ಈ ಧ್ಯಾನ ಕಾಮೇಚ್ಚೆಯನ್ನು ಹೆಚ್ಚು ಮಾಡುತ್ತದೆಯಂತೆ. ಧ್ಯಾನ ಮನಸ್ಸನ್ನು ಶಾಂತವಾಗಿರಿಸುತ್ತದೆ. ಜೊತೆಗೆ ಏಕಾಗ್ರತೆ ಕೂಡ ಹೆಚ್ಚುತ್ತದೆ.

ಧ್ಯಾನ ಮಾಡುವುದ್ರಿಂದ ದೇಹದಲ್ಲಿ ರಕ್ತ ಸಂಚಾರ ಸುಗಮವಾಗುತ್ತದೆ. ಇದನ್ನು ಹೆಚ್ಚೆಚ್ಚು ಅಭ್ಯಾಸ ಮಾಡಿದಲ್ಲಿ ರಕ್ತ ಸಂಚಾರ ಮತ್ತಷ್ಟು ಸುಲಭವಾಗುತ್ತದೆ. ಇದು ಲೈಂಗಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ. ಲೈಂಗಿಕ ಜೀವನದಲ್ಲಿ ಸುಧಾರಣೆಯಾಗುತ್ತದೆ.

ಒತ್ತಡಕ್ಕೆ ಕಾರ್ಟಿಸೋಲ್ ಎಂಬ ಹಾರ್ಮೋನ್ ಕಾರಣ. ಧ್ಯಾನ ಮಾಡಿದಾಗ ಈ ಹಾರ್ಮೋನ್ ಬಿಡುಗಡೆಯಾಗುವುದು ಕಡಿಮೆಯಾಗುತ್ತದೆ. ಇದ್ರಿಂದ ಒತ್ತಡ ಕಡಿಮೆಯಾಗುತ್ತದೆ. ಜೊತೆಗೆ ಕಾಮಾಸಕ್ತಿ ಹೆಚ್ಚಾಗುತ್ತದೆ.

ಧ್ಯಾನ ವಿಶ್ವಾಸವನ್ನು ಹೆಚ್ಚು ಮಾಡುತ್ತದೆ. ಆತ್ಮವಿಶ್ವಾಸವುಳ್ಳ ವ್ಯಕ್ತಿ ಸುಂದರವಾಗಿ ಕಾಣ್ತಾನೆ. ಧ್ಯಾನದಿಂದ ವ್ಯಕ್ತಿಯ ಆತ್ಮವಿಶ್ವಾಸ ಹೆಚ್ಚಿ, ಸುಂದರವಾಗಿ ಕಾಣುವ ಜೊತೆಗೆ ಸಂತೋಷ ನೆಲೆಸಿರುತ್ತದೆ. ಇದು ಲೈಂಗಿಕ ಜೀವನದ ಮೇಲೂ ಪ್ರಭಾವ ಬೀರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...