ಉಪ್ಪು ಹಾಗೂ ಲವಣಯುಕ್ತ ನೀರನ್ನು ಕುಡಿಯಲು ಆಗುವುದಿಲ್ಲ. ಆದರೆ ಕೆಲವೊಂದು ಊರಿನಲ್ಲಿ ನೀರಿನ ಸಮಸ್ಯೆ ಕಾಡುತ್ತದೆ.
ಆ ವೇಳೆ ಕೆಲವರಿಗೆ ಉಪ್ಪು ನೀರು ಮಾತ್ರ ದೊರೆಯುತ್ತದೆ. ಅಂತವರು ಆ ನೀರನ್ನು ಈ ರೀತಿ ಶುದ್ಧೀಕರಿಸಿ ಸೇವಿಸಬಹುದು.
* ಸ್ಫಟಿಕ, ಉಪ್ಪು ನೀರಿನಲ್ಲಿರುವ ರಂಜಕ ಅಂಶವನ್ನು ಹಾಗೂ ಕೊಳೆಯನ್ನು ತೆಗೆದುಹಾಕಿ ನೀರನ್ನು ಶುದ್ಧೀಕರಿಸುತ್ತದೆ. ಹಾಗಾಗಿ ಒಂದು ಪಾತ್ರೆಯಲ್ಲಿರುವ ನೀರಿಗೆ ಸುಮಾರು 25ಗ್ರಾಂನಷ್ಟು ಸ್ಫಟಿಕವನ್ನು ಹಾಕಿ ಕುದಿಸಿ ತಣ್ಣಗಾದ ಬಳಿಕ ಸೋಸಿ ಕುಡಿಯಬಹುದು,
* ಸೂರ್ಯನ ಬಿಸಿಲಿನ ಸಹಾಯದಿಂದ ಕೂಡ ಉಪ್ಪು ನೀರನ್ನು ಶುದ್ಧೀಕರಿಸಿ ಕುಡಿಯಬಹುದು. ಬಾಟಲಿನಲ್ಲಿ ಉಪ್ಪು ನೀರನ್ನು ತುಂಬಿಸಿ ಮುಚ್ಚಳ ಮುಚ್ಚಿ ಕನಿಷ್ಠ 24 ಗಂಟೆಗಳ ಕಾಲ ಸೂರ್ಯ ಬಿಸಿಲಿನಲ್ಲಿ ಇಡಿ. ಬಳಿಕ ಈ ನೀರನ್ನು ಸೋಸಿ ಕುಡಿಯಬಹುದು.
* ಉಪ್ಪು ನೀರಿಗೆ ಕ್ಲೋರಿನ್ ನ್ನು ಹಾಕಿದರೆ ಅದನ್ನು ಸೇವಿಸಬಹುದು. ಉಪ್ಪು ನೀರಿಗೆ ಕ್ಲೋರಿನ್ ಮಾತ್ರೆ ಸೇರಿಸಿ ಸ್ವಲ್ಪ ಸಮಯ ಬಿಡಿ. ಬಳಿಕ ಅದನ್ನು ಕುದಿಸಿ ತಣ್ಣಗಾಗಿಸಿ ಕುಡಿಯಿರಿ.