ದೇಹದಲ್ಲಿ ರಕ್ತಹೀನತೆ ಸಮಸ್ಯೆ ಕಾಡಿದರೆ ದಾಳಿಂಬೆ ಹಣ್ಣನ್ನು ಸೇವಿಸಿದರೆ ಉತ್ತಮ ಎನ್ನಲಾಗಿದೆ. ಹಾಗಾಗಿ ದಾಳಿಂಬೆ ಹಣ್ಣು ಆರೋಗ್ಯಕ್ಕೆ ಬಹಳ ಉತ್ತಮವೆಂದು ಹೇಳಲಾಗುತ್ತದೆ. ಆದರೆ ಈ ಸಮಸ್ಯೆ ಇರುವವರು ದಾಳಿಂಬೆ ಹಣ್ಣನ್ನು ಸೇವಿಸದಿರುವುದೇ ಉತ್ತಮ ಎನ್ನಲಾಗಿದೆ. ಅವರು ಯಾರು ಎಂಬುದನ್ನು ತಿಳಿದುಕೊಳ್ಳಿ.
*ಚರ್ಮದ ಅಲರ್ಜಿ ಸಮಸ್ಯೆ ಇರುವವರು ದಾಳಿಂಬೆ ಹಣ್ಣು ಸೇವಿಸಬಾರದು. ಇದರಿಂದ ದೇಹದಲ್ಲಿ ರಕ್ತ ಹೆಚ್ಚಾಗಿ ಕೆಂಪು ದದ್ದುಗಳು ಮೂಡುತ್ತವೆ.
*ಲೋ ಬಿಪಿ ಸಮಸ್ಯೆ ಇರುವವರು ದಾಳಿಂಬೆ ಹಣ್ಣನ್ನು ಸೇವಿಸಬಾರದು. ಯಾಕೆಂದರೆ ಇದು ದೇಹದಲ್ಲಿ ರಕ್ತಪರಿಚಲನೆಯ ವೇಗವನ್ನು ನಿಧಾನಗೊಳಿಸುತ್ತದೆ. ಇದು ನಿಮ್ಮ ಸಮಸ್ಯೆಯನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ.
*ಕೆಮ್ಮಿನ ಸಮಸ್ಯೆ ಇರುವವರು ದಾಳಿಂಬೆ ಹಣ್ಣನ್ನು ಸೇವಿಸಬೇಡಿ. ಇದರಿಂದ ದೇಹದಲ್ಲಿ ಸೋಂಕು ಹೆಚ್ಚಾಗಿ ಕೆಮ್ಮು ಹೆಚ್ಚಾಗುವ ಸಾಧ್ಯತೆ ಇದೆ.
*ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ದಾಳಿಂಬೆ ಹಣ್ಣನ್ನು ತಿನ್ನಬೇಡಿ. ಇದರಿಂದ ಜೀರ್ಣಾಂಗ ವ್ಯವಸ್ಥೆ ಹದಗೆಡುತ್ತದೆ.
*ಮಾನಸಿಕ ತೊಂದರೆಯಿಂದ ಬಳಲುತ್ತಿರುವವರು ದಾಳಿಂಬೆ ಹಣ್ಣನ್ನು ಸೇವಿಸಬೇಡಿ. ಇದರಿಂದ ನೀವು ತೆಗೆದುಕೊಳ್ಳುತ್ತಿರುವ ಔಷಧಿಯೊಂದಿಗೆ ದಾಳಿಂಬೆ ಪ್ರತಿಕ್ರಿಯಿಸಬಹುದು. ಇದರಿಂದ ಮೆದುಳಿಗೆ ಸಮಸ್ಯೆಯಾಗಬಹುದು.