ಆರೋಗ್ಯವಾಗಿರಲು ನಾವು ಆಹಾರ ಪದಾರ್ಥ, ಹಣ್ಣುಗಳನ್ನು, ತರಕಾರಿಗಳನ್ನು ಸೇವಿಸುತ್ತೇವೆ. ಆದರೆ ಇವುಗಳನ್ನು ತಿನ್ನುವಾಗ ಮಾಡುವಂತಹ ಸಣ್ಣ ತಪ್ಪುಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಆಹಾರ ಪದಾರ್ಥಗಳು ಯಾವುದೆಂಬುದನ್ನು ತಿಳಿದುಕೊಳ್ಳಿ.
*ಆಯುರ್ವೇದದ ಪ್ರಕಾರ ಕ್ಯಾರೆಟ್ ಅನ್ನು ಹಣ್ಣುಗಳ ಜೊತೆಗೆ ಸೇವಿಸಬಾರದು. ಯಾಕೆಂದರೆ ಇದು ಜೀರ್ಣಾಂಗ ವ್ಯವಸ್ಥೆಯನ್ನು ಹಾಳು ಮಾಡುತ್ತದೆ.
*ಜೇನುತುಪ್ಪವನ್ನು ಬಿಸಿ ಮಾಡಿ ಸೇವಿಸಬೇಡಿ. ಅಥವಾ ಬಿಸಿ ಪದಾರ್ಥಗಳಿಗೆ ಮಿಕ್ಸ್ ಮಾಡಬೇಡಿ. ಇದರಿಂದ ಆರೋಗ್ಯ ಕೆಡುತ್ತದೆ.
ಹಣ್ಣು – ತರಕಾರಿ ಸಿಪ್ಪೆ ಎಸೆಯಬೇಡಿ
*ಮಾವು, ಮೊಸರು, ಮೀನು ಅಥವಾ ಮಾಂಸವನ್ನು ಬಿಸಿ ಪಾನೀಯಗಳೊಂದಿಗೆ ಸೇವಿಸಬಾರದು. ಇದರಿಂದ ಲಿವರ್ ಸಮಸ್ಯೆ ಕಾಡುತ್ತದೆ.
*ಹಸಿ ತರಕಾರಿ ಹಾಗೂ ಬೇಯಿಸಿದ ತರಕಾರಿಯನ್ನು ಮಿಕ್ಸ್ ಮಾಡಿ ಸೇವಿಸಬೇಡಿ. ಇದರಿಂದ ಅಜೀರ್ಣ ಸಮಸ್ಯೆ ಕಾಡುತ್ತದೆ.