alex Certify ಇಲ್ಲಿದೆ ಪಾದಗಳ ಉರಿಯೂತ ಸಮಸ್ಯೆಗೆ ಮನೆ ಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಪಾದಗಳ ಉರಿಯೂತ ಸಮಸ್ಯೆಗೆ ಮನೆ ಮದ್ದು

ಕೆಲವೊಮ್ಮೆ ದೀರ್ಘಾವಧಿಯ ಕೆಲಸದಿಂದ ದಣಿದು ಮನೆಗೆ ಬಂದು ನೋಡಿದರೆ ನಿಮ್ಮ ಪಾದಗಳು ನೋವಿನಿಂದ ಕೂಡಿದ್ದು, ಊತ ಬಂದಿರುತ್ತದೆ. ಕೆಲವೊಮ್ಮೆ ಮಹಿಳೆಯರು, ಹೈ ಹೀಲ್ಸ್ ಪಾದರಕ್ಷೆಗಳನ್ನು ಧರಿಸಿ ದಿನವಿಡೀ ಓಡಾಡಿದಾಗ ಹಾಗೂ ಸರಿಯಾದ ವ್ಯಾಯಾಮವನ್ನು ಅನುಸರಿಸದೇ ಇದ್ದಾಗ ಈ ರೀತಿಯ ನೋವನ್ನು ಅನುಭವಿಸುತ್ತಾರೆ. ಪಾದಗಳಲ್ಲಿ ಸೆಳೆತವಿದ್ದಾಗ ಅದು ನೋವುಂಟು ಮಾಡಿ, ನಡೆದಾಡಲು ಕಷ್ಟವಾಗುತ್ತದೆ.

ಈ ಸಮಸ್ಯೆಗೆ ಮನೆಯಲ್ಲೆ ಸರಿಯಾದ ಔಷಧೋಪಚಾರವನ್ನು ಅನುಸರಿಸಿದರೆ ಉತ್ತಮ. ಇಂತಹ ಸಮಯದಲ್ಲಿ ಕೆಲವು ತಾಸು ವಿಶ್ರಾಂತಿಯನ್ನು ಪಡೆದುಕೊಂಡರೂ ಸಹ ಯಾವುದೇ ಪರಿಣಾಮವಾಗುವುದಿಲ್ಲ. ಅದಕ್ಕೆಂದೇ ಇಲ್ಲಿದೆ ಸರಳವಾಗಿ ಮನೆಯಲ್ಲೆ ಅನುಸರಿಸಬಹುದಾದಂತಹ ಪರಿಹಾರಗಳು.

ದನಿಯಾ ಬೀಜಗಳು : ಇದು ಊದಿಕೊಂಡಿರುವ ಪಾದಗಳಿಂದ ಹೆಚ್ಚುವರಿ ದ್ರವವನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. 3 ಚಮಚ ದನಿಯಾ ಬೀಜಗಳನ್ನು ನೀರಿನಲ್ಲಿ ಕುದಿಸಿ, ಸೋಸಿಕೊಂಡ ನೀರನ್ನು ದಿನಕ್ಕೆ 2 ಬಾರಿ ಕುಡಿಯಿರಿ.

ಉಪ್ಪು ನೀರು : ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಪರಿಹಾರವಿದು. ಉರಿಯೂತವನ್ನು ನಿವಾರಿಸುವಲ್ಲಿ ಉಪ್ಪು ಅದ್ಭುತವಾಗಿ ಕೆಲಸವನ್ನು ಮಾಡುತ್ತದೆ. ಒಂದು ಬಕೆಟ್ ನಲ್ಲಿ ಬೆಚ್ಚಗಿನ ನೀರನ್ನು ತೆಗೆದುಕೊಂಡು, ಅದಕ್ಕೆ ಸ್ವಲ್ಪ ಉಪ್ಪನ್ನು ಮಿಶ್ರ ಮಾಡಿ, 10 ನಿಮಿಷಗಳ ಕಾಲ ನಿಮ್ಮ ಪಾದಗಳನ್ನು ಅದರಲ್ಲಿ ನೆನೆಸಿ. ನಂತರ ತೊಳೆದುಕೊಳ್ಳಿ.

ಶುಂಠಿ : ಇದರಲ್ಲಿ ನೈಸರ್ಗಿಕ ವರ್ಧಕವಿದ್ದು, ಅದು ಊತವಿರುವ ಪಾದಗಳ ನೋವನ್ನು ಕಡಿಮೆ ಮಾಡುತ್ತದೆ. ಇದು ಊತಕ್ಕೆ ಕಾರಣವಾದ ಸೋಡಿಯಂ ಅನ್ನು ದುರ್ಬಲಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಶುಂಠಿಯ ಎಣ್ಣೆಯಿಂದ ನಿಮ್ಮ ಪಾದಗಳನ್ನು ಮಸಾಜ್ ಮಾಡಿಕೊಳ್ಳಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...