ಧಾನ್ಯಗಳು ದೇಹಕ್ಕೆ ಅತ್ಯಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ, ಹಾಗಾಗಿ ಇದನ್ನು ನಿತ್ಯ ಸೇವಿಸುವುದು ಬಹಳ ಒಳ್ಳೆಯದು ಎಂದು ಹೇಳುವುದನ್ನು ನಾವು ಶಾಲಾ ದಿನಗಳಿಂದಲೂ ಕೇಳಿಕೊಂಡು ಬರುತ್ತಿದ್ದೇವೆ. ಹಾಗಿದ್ದರೆ ಇದನ್ನು ಹೇಗೆ ಸೇವಿಸಬೇಕು.
ಮೊಳಕೆ ಬರಿಸಿದ ಕಾಳುಗಳನ್ನು ಸೇವಿಸುವುದರಿಂದ ಕೆಲವೊಮ್ಮೆ ಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುವುದುಂಟು. ಹೀಗೆ ಮೊಳಕೆ ಬರುವಾಗ ಕೆಲವಷ್ಟು ಬ್ಯಾಕ್ಟೀರಿಯಾಗಳು ಅದರ ಜೊತೆ ಸೇರಿ ವಿಷಾಹಾರವಾಗಿ ಬದಲಾಗುತ್ತದೆ ಎನ್ನಲಾಗುತ್ತದೆ.
ಕಿತ್ತಳೆ ಸಿಪ್ಪೆಯ ಟೀ ಸೇವಿಸುವುದರಿಂದ ಈ ಸಮಸ್ಯೆ ನಿವಾರಿಸಬಹುದು
ಇದನ್ನು ತಪ್ಪಿಸಲು ಒಂದು ಚಮಚ ಆಲಿವ್ ಆಯಿಲ್ ಅನ್ನು ಬಿಸಿ ಮಾಡಿ ಮೊಳಕೆ ಬಂದ ಕಾಳುಗಳನ್ನು ಅದರ ಮೇಲೆ ಹಾಕಿ ಸೇವಿಸಿ. ಇಲ್ಲವೇ ಅದನ್ನು ತುಸು ಹುರಿಯಿರಿ. ಇದರಿಂದ ಬ್ಯಾಕ್ಟೀರಿಯಾಗಳು ಇದ್ದರೂ ಸತ್ತು ಹೋಗುತ್ತವೆ.
ಬಿಸಿ ನೀರಿಗೆ ಮೊಳಕೆ ಕಾಳುಗಳನ್ನು ಹಾಕಿ ಐದು ನಿಮಿಷ ಬಿಟ್ಟು ತೆಗೆಯುವುದರಿಂದಲೂ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಇದರಿಂದ ಪೋಷಕಾಂಶಗಳು ನಷ್ಟವಾಗುವುದಿಲ್ಲ. ರುಚಿಯೂ ಬದಲಾಗುವುದಿಲ್ಲ. ಅರೆಬೇಯಿಸಿದ ರೂಪದಲ್ಲಿ, ಸಲಾಡ್ ಮೂಲಕ ಅಥವಾ ಅನ್ನಕ್ಕೆ ಬೆರೆಸಿ ಮೊಳಕೆ ಕಾಳುಗಳನ್ನು ಸೇವಿಸಬಹುದು.