ಫಿಟ್ ಆಗಿರಬೇಕೆಂಬ ಬಯಕೆ ಯಾರಿಗೆ ಇರುವುದಿಲ್ಲ ಹೇಳಿ. ಕೊರೋನಾ, ಮನೆಯಿಂದಲೇ ಕೆಲಸ ಎಂಬಿತ್ಯಾದಿ ಗಲಿಬಿಲಿಗಳ ಮಧ್ಯೆಯೂ ಈ ಕೆಳಗಿನ ಟಿಪ್ಸ್ ಗಳನ್ನು ಅನುಸರಿಸುವುದರಿಂದ ನಿಮ್ಮ ದೇಹದ ಆರೋಗ್ಯವನ್ನು ಫಿಟ್ ಆಗಿ ಇರಿಸಿಕೊಳ್ಳಬಹುದು.
ಕಣ್ಣುಗಳ ಕಾಳಜಿ ಮಾಡುವುದು ಬಹಳ ಮುಖ್ಯ. ಕಂಪ್ಯೂಟರ್ ನಲ್ಲಿ ಕೆಲಸ, ಮೊಬೈಲ್ ನಲ್ಲಿ ಕ್ಲಾಸ್ ವೀಕ್ಷಣೆ ಮತ್ತಿತರ ಕಾರಣದಿಂದ ಕಣ್ಣುಗಳು ಹಾಳಾಗುತ್ತಿವೆ. ಹಾಗಾಗಿ ಕಣ್ಣಿನ ಕಾಳಜಿ ಮಾಡುವುದು ಬಹಳ ಮುಖ್ಯ.
ಇಡೀ ದಿನ ಕೂತು ಕೆಲಸ ಮಾಡುವ ಕಾರಣಕ್ಕೆ ಅಥವಾ ಇನ್ನಿತರ ಕಾರಣಗಳಿಗೆ ಕಾಲಿನ ಮೇಲೆ ಒತ್ತಡ ಬೀಳುವ ಸಾಧ್ಯತೆಗಳೇ ಹೆಚ್ಚು. ಹಾಗಾಗಿ ನಿತ್ಯ ಕಾಲಿಗೆ ಎಣ್ಣೆಯಿಂದ ಮಸಾಜ್ ಮಾಡಿ. ಬಿಸಿನೀರಿನಲ್ಲಿ ಹತ್ತರಿಂದ ಇಪ್ಪತ್ತು ನಿಮಿಷ ಕಾಲುಗಳನ್ನು ಇಳಿಬಿಡಿ.
‘ಮಟರ್ ದೋಕ್ಲಾ’ ಮಾಡುವ ವಿಧಾನ
ಬಿಸಿನೀರಿಗೆ ಕಾಳು ಮೆಣಸಿನ ಪುಡಿ ಹಾಗೂ ತುಳಸಿ ಎಲೆಗಳನ್ನು ಹಾಕಿಡಿ. ದಿನವಿಡೀ ಅದೇ ನೀರನ್ನು ಕುಡಿಯಿರಿ. ಇದರಿಂದ ಶೀತ ಕೆಮ್ಮಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇವುಗಳ ಕಷಾಯ ತಯಾರಿಸಿ ಕುಡಿಯುವುದು ಕೂಡಾ ಒಳ್ಳೆಯದೇ.
ಹೆಚ್ಚು ಖಾರ ಹಾಗೂ ಜಂಕ್ ಫುಡ್ ಗಳಿಂದ ದೂರವಿರಿ, ಮಸಾಲೆ ಪದಾರ್ಥಗಳನ್ನು ವಾರಕ್ಕೊಮ್ಮೆ ತಿನ್ನಿ. ಋತುಮಾನಕ್ಕೆ ಅನುಗುಣವಾಗಿ ಹಣ್ಣುಗಳನ್ನು ಸೇವಿಸಿ.