ಕೊರೊನಾ ಬಿಕ್ಕಟ್ಟಿನ ಮಧ್ಯೆ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ವೈದ್ಯರು ಸಲಹೆ ನೀಡುತ್ತಿದ್ದಾರೆ. ಈ ದಿನಗಳಲ್ಲಿ ಹವಾಮಾನವೂ ಬದಲಾಗುತ್ತಿದೆ. ಋತುಗಳ ಬದಲಾವಣೆಯೊಂದಿಗೆ ಕೆಮ್ಮು ಮತ್ತು ಗಂಟಲು ನೋವು ಸೇರಿದಂತೆ ಸಣ್ಣ ರೋಗಗಳು ಕಾಡುತ್ತವೆ. ಇದಕ್ಕೆ ಮನೆಯಲ್ಲಿಯೇ ಮದ್ದಿದೆ.
ಒಣ ಕೆಮ್ಮು ಮತ್ತು ಗಂಟಲು ನೋವಿಗೆ ತಾಜಾ ಪುದೀನ ಎಲೆಗಳು ಪ್ರಯೋಜನಕಾರಿ. ಪುದೀನಾ ಎಲೆ ಮತ್ತು ಕಪ್ಪು ಜೀರಿಗೆಗಳನ್ನು ನೀರಿನಲ್ಲಿ ಕುದಿಸಿ ಮತ್ತು ದಿನಕ್ಕೆ ಒಮ್ಮೆ ಅದ್ರ ಉಗಿ ತೆಗೆದುಕೊಳ್ಳುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ.
ಇದಲ್ಲದೆ ಲವಂಗ ಪುಡಿಯನ್ನು ಸಕ್ಕರೆ – ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆ ಎರಡು ಮೂರು ಬಾರಿ ಸೇವಿಸುವುದರಿಂದ ಈ ಸಮಸ್ಯೆ ಕಡಿಮೆಯಾಗುತ್ತದೆ.
ಟೇಸ್ಟಿ ಕುಂಬಳಕಾಯಿ ಸೂಪ್ ಮಾಡಿ ನೋಡಿ
ಇದಲ್ಲದೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅರಿಶಿನ, ಕೊತ್ತಂಬರಿ, ಜೀರಿಗೆ ಮತ್ತು ಬೆಳ್ಳುಳ್ಳಿಯನ್ನು ಆಹಾರದಲ್ಲಿ ಬಳಸಬೇಕು. ಹಾಲಿಗೆ ಅರಿಶಿನವನ್ನು ಬೆರೆಸಿ ಕುಡಿಯಿರಿ.
ಬಿಸಿ ನೀರು, ಗಿಡಮೂಲಿಕೆ ಚಹಾ, ಕಷಾಯವನ್ನು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರ ಜೊತೆಗೆ ಯೋಗ, ಧ್ಯಾನ ಮತ್ತು ಪ್ರಾಣಾಯಾಮವನ್ನೂ ಮಾಡಬೇಕು.