ಬೇಸಿಗೆ ಕಾಲ ಪ್ರಾರಂಭವಾಗುತ್ತಿದೆ. ಈ ಸಮಯದಲ್ಲಿ ವಾತಾವರಣ ತುಂಬಾ ಬಿಸಿಯಾಗಿರುವುದರಿಂದ ನಿಮ್ಮ ದೇಹ ಕೂಡ ಬಿಸಿ ಎನಿಸುತ್ತದೆ. ದೇಹದಲ್ಲಿ ಉರಿ ಕಂಡುಬರುತ್ತದೆ. ಹಾಗಾಗಿ ಬೇಸಿಗೆ ಕಾಲದಲ್ಲಿ ನಿಮ್ಮ ದೇಹವನ್ನು ತಂಪಾಗಿಸಲು ಹೀಗೆ ಮಾಡಿ.
* ಪುದೀನಾ ದೇಹವನ್ನು ಕೂಲ್ ಆಗಿಸುತ್ತದೆ ಮತ್ತು ಇದು ಚರ್ಮಕ್ಕೂ ಉತ್ತಮ. ಹಾಗಾಗಿ ಸ್ಪ್ರೇ ಬಾಟಲಿನಲ್ಲಿ ಪುದೀನಾ ಎಣ್ಣೆ ಮಿಶ್ರಿತ ನೀರನ್ನು ಹಾಕಿ ಆಗಾಗ ಸ್ಪ್ರೇ ಮಾಡಿಕೊಳ್ಳಿ.
* ತುಂಬಾ ಸೆಕೆಯಾಗುತ್ತಿದ್ದರೆ ನಿಮ್ಮ ಮಣಿಕಟ್ಟನ್ನು ತಣ್ಣ ನೆಯ ನೀರಿನಲ್ಲಿ ಮುಳುಗಿಸಿಡಿ. ಮಣಿಕಟ್ಟಿನ ರಕ್ತನಾಳಗಳು ನಿಮ್ಮ ಚರ್ಮದ ಮೇಲ್ಮೈಗೆ ಹತ್ತಿರವಾಗಿರುವುದರಿಂದ ದೇಹ ತಂಪಾಗುತ್ತದೆ.
ಮಕ್ಕಳ ಮನ ಗೆಲ್ಲುವುದು ಹೇಗೆ…?
* ದೇಹ ತಂಪಾಗಿಸಲು ಬಾಟಲಿಗೆ ಐಸ್ ತುಂಬಿಸಿ ಫ್ಯಾನ್ ಗಾಳಿಯಲ್ಲಿ ಹಿಡಿಯಿರಿ ಇದರಿಂದ ನಿಮಗೆ ತಂಪಾದ ಗಾಳಿ ಸಿಗುತ್ತದೆ. ಎಸಿಯ ಅಗತ್ಯವಿಲ್ಲ.
* ಬೇಸಿಗೆ ಬಿಸಿಲಿನಿಂದಾಗುವ ಚರ್ಮದ ಉರಿಯನ್ನು ಕಡಿಮೆ ಮಾಡಲು ಅಲೋವೆರಾ ಜೆಲ್ ನಿಂದ ಐಸ್ ಕ್ಯೂಬ್ ತಯಾರಿಸಿ ನಿಧಾನವಾಗಿ ರಬ್ ಮಾಡಿ.