ದೇಶದಲ್ಲಿ ಕೊರೊನಾ ಎರಡನೇ ಅಲೆ ಆರ್ಭಟಿಸುತ್ತಿದೆ. ಪ್ರತಿ ನಿತ್ಯ ಸೋಂಕಿತರ ಸಂಖ್ಯೆ ಲಕ್ಷಗಳ ಗಡಿ ದಾಟುತ್ತಿದ್ದು, ವಿಶ್ವದಲ್ಲಿ ಒಂದೇ ದಿನ ಅತಿ ಹೆಚ್ಚು ಸೋಂಕಿತರು ಪತ್ತೆಯಾದ ರಾಷ್ಟ್ರ ಎಂಬ ಅಪಖ್ಯಾತಿಗೆ ಭಾರತ ಪಾತ್ರವಾಗಿದೆ.
ಕೊರೊನಾ ಸಮಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಬಹಳ ಅಗತ್ಯ. ಸಾಮಾನ್ಯವಾಗಿ ಮಹಿಳೆಯರಿಗಿಂತ ಪುರುಷರು ಹೊರಗಡೆ ಓಡಾಡುತ್ತಾರೆ. ಅವ್ರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಮಹಿಳೆಯರಿಗಿಂತ ಪುರುಷರು ಹೆಚ್ಚಿನ ಪ್ರಮಾಣದಲ್ಲಿ ಕೊರೊನಾಗೆ ಒಳಗಾಗ್ತಿದ್ದಾರೆ. ಕೊರೊನಾ ಸಾವಿನ ಪ್ರಮಾಣವೂ ಅವ್ರಲ್ಲಿ ಹೆಚ್ಚಿದೆ.
ಕೊರೊನಾದ ಈ ಸಂದರ್ಭದಲ್ಲಿ ಪುರುಷರು ಎರಡು ಆಹಾರವನ್ನು ಅವಶ್ಯಕವಾಗಿ ಸೇವಿಸಬೇಕು. ಹೌದು, ಬೆಳ್ಳುಳ್ಳಿ ಹಾಗೂ ಪಿಸ್ತಾವನ್ನು ಅವ್ರು ಸೇವನೆ ಮಾಡಬೇಕು. ಪಿಸ್ತಾ ಹಾಗೂ ಬೆಳ್ಳುಳ್ಳಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದ ಶಕ್ತಿ ಕೂಡ ವೃದ್ಧಿಯಾಗುತ್ತದೆ.
ಪಿಸ್ತಾ ಹಾಗೂ ಬೆಳ್ಳುಳ್ಳಿ ಸೇವನೆಯಿಂದ ವೈರಲ್, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕು ದೇಹದೊಳಗೆ ಸೇರದಂತೆ ತಡೆಯುತ್ತದೆ.
ಕಣ್ಣಿನ ಊತ ಕಡಿಮೆ ಮಾಡುತ್ತೆ ಈ ಸಿಂಪಲ್ ಟಿಪ್ಸ್
ಇವೆರಡನ್ನೂ ಸರಿಯಾದ ವಿಧಾನದಲ್ಲಿ ಸೇವನೆ ಮಾಡಬೇಕು. ಬೆಳ್ಳುಳ್ಳಿಯನ್ನು ಚಟ್ನಿ, ಉಪ್ಪಿನಕಾಯಿ ಸೇರಿದಂತೆ ಆಹಾರದ ಮೂಲಕ ದೇಹ ಸೇರುವಂತೆ ನೋಡಿಕೊಳ್ಳಬೇಕು.
ಹಸಿ ಬೆಳ್ಳುಳ್ಳಿ ಸೇವನೆ ಮಾಡುವವರಾಗಿದ್ದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವನೆ ಮಾಡಬೇಕು. ನೀರಿನ ಜೊತೆ ಸೇವನೆ ಮಾಡಬೇಕು.
ದಿನಕ್ಕೆ 8-10 ಪಿಸ್ತಾ ಸೇನೆ ಮಾಡಬೇಕು. ಬೆಳಿಗ್ಗೆ ಆಹಾರದ ಜೊತೆ ಊಟದಲ್ಲಿ ಅಥವಾ ರಾತ್ರಿ ಊಟಕ್ಕೆ ಮೊದಲು ಸೇವನೆ ಮಾಡಬೇಕು.
ಬೆಳ್ಳುಳ್ಳಿ ಹಾಗೂ ಪಿಸ್ತಾ ಸೇವನೆ ಜೊತೆ ಎಂದೂ ಹಾಲು ಅಥವಾ ಹಾಲಿನ ಪದಾರ್ಥವನ್ನು ಸೇವಿಸಬಾರದು.
ಬಿಪಿ ಕಡಿಮೆಯಿರುವವರು ಬೆಳ್ಳುಳ್ಳಿ ಸೇವನೆ ಮಾಡಬಾರದು.