ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಉತ್ತಮವಾಗಿದ್ದರೆ ಯಾವುದೇ ಕಾಯಿಲೆ ನಮ್ಮನ್ನು ಕಾಡುವುದಿಲ್ಲ. ಉತ್ತಮ ಜೀವನ ಶೈಲಿಯನ್ನು ಫಾಲೋ ಮಾಡಿದರೆ ಉತ್ತಮವಾದ ಆರೋಗ್ಯವನ್ನು ಪಡೆಯಬಹುದು. ಹಾಗಾಗಿ ಈ ಮೂರು ಕೆಲಸವನ್ನು ಪ್ರತಿದಿನ ತಪ್ಪದೇ ಪಾಲಿಸಿ.
* ಪ್ರತಿದಿನ ಪೌಷ್ಟಿಕಾಂಶಯುಕ್ತ, ಉತ್ತಮವಾದ ಆಹಾರವನ್ನು ಸೇವನೆ ಮಾಡಿ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ತರಕಾರಿ, ಹಣ್ಣುಗಳು, ಧಾನ್ಯಗಳನ್ನು ಸೇವಿಸಿ.
ಮೊಳಕೆ ಕಾಳಿನ ರೋಲ್ ಮಾಡಿ ನೋಡಿ
* ಪ್ರತಿದಿನ ಚೆನ್ನಾಗಿ ನಿದ್ರೆ ಮಾಡಿ. ಇದರಿಂದ ಕೂಡ ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಒತ್ತಡ, ಚಿಂತೆ, ದಣಿವು, ಆಯಾಸ ಕಡಿಮೆಯಾಗುತ್ತದೆ. ಹಾಗಾಗಿ ದಿನಕ್ಕೆ 6-8 ಗಂಟೆಗಳ ನಿದ್ರೆ ಮಾಡಿ.
* ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪ್ರತಿದಿನ ಕೆಲಸ, ವ್ಯಾಯಾಮಗಳನ್ನು ಮಾಡಿ. ವಾಕಿಂಗ್, ರನ್ನಿಂಗ್ ಮುಂತಾದವುಗಳನ್ನು ಪ್ರತಿದಿನ ಮಾಡಿ. ಇದು ದೇಹವನ್ನು ಸದೃಢವಾಗಿಸುತ್ತದೆ.