![](https://kannadadunia.com/wp-content/uploads/2021/03/Aswhagandh-2-620x413-1.jpg)
ಆಯುರ್ವೇದದಲ್ಲಿ ಹೆಚ್ಚಾಗಿ ಬಳಸುವ ಅಶ್ವಗಂಧ ನಮ್ಮ ದೇಹದ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದರ ಸೇವನೆಯಿಂದ ಮಹಿಳೆಯರು ಈ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಋತುಬಂಧ ಸಮೀಪಿಸುತ್ತಿರುವ ಮಹಿಳೆಯರು ನಿತ್ಯ ಅಶ್ವಗಂಧವನ್ನು ಸೇವಿಸುವುದರಿಂದ ರಕ್ತ ಪರಿಚಲನೆ ಹೆಚ್ಚುತ್ತದೆ. ಒತ್ತಡ ಕಡಿಮೆಯಾಗುತ್ತದೆ ಮತ್ತು ಮಾನಸಿಕ ಕಿರಿಕಿರಿ ದೂರವಾಗುತ್ತದೆ.
ಈ 5 ಹಂತದಲ್ಲಿ ಶುಂಠಿಯನ್ನು ಬಳಸುವುದರಿಂದ ಹೆಚ್ಚುತ್ತೆ ನಿಮ್ಮ ʼಸೌಂದರ್ಯʼ
ಥೈರಾಯ್ಡ್ ಸಮಸ್ಯೆಯಿಂದಲೂ ಇದು ಮುಕ್ತಿ ನೀಡುತ್ತದೆ. ಮಹಿಳೆಯರ ಋತುಚಕ್ರದಲ್ಲಿ ಬದಲಾವಣೆ, ತೂಕ ಹೆಚ್ಚುವುದು, ಸುಸ್ತು, ಕೂದಲು ಉದುರುವುದು ಮತ್ತು ಮಲಬದ್ಧತೆಯಂಥ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಒತ್ತಡವನ್ನು ಕಡಿಮೆ ಮಾಡಿ ನಿಮಗೆ ಆರಾಮದಿಂದ ನಿದ್ದೆ ಮಾಡಲು ಅವಕಾಶ ಕಲ್ಪಿಸುತ್ತದೆ.