ಕೊರೊನಾ ಎರಡನೇ ಅಲೆ ಹೆಚ್ಚಾಗಿದೆ. ಕೊರೊನಾ ಪತ್ತೆಯಿಂದ ಹಿಡಿದು ಚಿಕಿತ್ಸೆವರೆಗೆ ಯಾವುದೂ ಸರಿಯಾಗಿ ಸಿಗ್ತಿಲ್ಲ. ಕೊರೊನಾ ಪತ್ತೆಗೆ ಸಿಟಿ ಸ್ಕ್ಯಾನ್ ಮಾಡಿಸಲಾಗ್ತಿದೆ. ಸಿಟಿ ಸ್ಕ್ಯಾನ್ ನಲ್ಲಿ ಸಣ್ಣ ಸಣ್ಣ ಅಂಶವನ್ನೂ ಸುಲಭವಾಗಿ ಪತ್ತೆ ಮಾಡಬಹುದು.
ಕೋವಿಡ್ ಪರೀಕ್ಷೆಯಲ್ಲಿ ವೈದ್ಯರು ಎಚ್‌ಆರ್‌ಸಿಟಿ ಎದೆಯ ಸ್ಕ್ಯಾನ್ ಮಾಡಿಸಲು ಸೂಚನೆ ನೀಡುತ್ತಾರೆ. ಈ ಪರೀಕ್ಷೆಯ ಮೂಲಕ, ಶ್ವಾಸಕೋಶವನ್ನು 3ಡಿ ಚಿತ್ರದಲ್ಲಿ ಕಾಣಬಹುದು. ಇದು ಶ್ವಾಸಕೋಶದ ಸೋಂಕನ್ನು ತ್ವರಿತವಾಗಿ ಪತ್ತೆ ಹಚ್ಚಲು ನೆರವಾಗುತ್ತದೆ. ಶ್ವಾಸಕೋಶದಲ್ಲಿ ಎಷ್ಟು ಸೋಂಕಿದೆ ಎಂಬುದನ್ನು ತಿಳಿಯಲು ನೆರವಾಗುತ್ತದೆ.
ಕೊರೊನಾ ಪತ್ತೆಗೆ ನೆರವಾಗುವ ಈ ಸಿಟಿ ಸ್ಕ್ಯಾನ್ ನಿಂದ ಸಾಕಷ್ಟು ನಷ್ಟವಿದೆ. ಸಿಟಿ ಸ್ಕ್ಯಾನ್ ಮಾಡುವಾಗ ಲ್ಯಾಬ್‌ನಲ್ಲಿ ಎಲ್ಲಾ ರೀತಿಯ ಪರೀಕ್ಷೆ ಮಾಡಲಾಗುತ್ತದೆ. ಈ ಪರೀಕ್ಷೆಗಳಿಂದ ವಿಕಿರಣವು ಹೊರಬರುತ್ತದೆ. ಇದು ರೋಗಿಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಕೆಲವೊಮ್ಮೆ ಈ ವಿಕಿರಣವು ಸಿಟಿ ಸ್ಕ್ಯಾನ್ ಮೂಲಕ ದೇಹದ ಇತರ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ.
ಸಿಟಿ ಸ್ಕ್ಯಾನ್ ಮಾಡುವುದ್ರಿಂದ ಮೂತ್ರಪಿಂಡದ ಸಮಸ್ಯೆ ಉಂಟಾಗಬಹುದು. ಸಿಟಿ ಸ್ಕ್ಯಾನ್ ಪಡೆಯುವ ಮೊದಲು ನಿಮಗೆ ಯಾವುದೇ ಮೂತ್ರಪಿಂಡದ ಸಮಸ್ಯೆ ಇದ್ದರೆ, ಇದನ್ನು ವೈದ್ಯರಿಗೆ ತಿಳಿಸಿ.
ಮಧುಮೇಹ ರೋಗಿಯಾಗಿದ್ದರೆ ಮತ್ತು ಔಷಧಿ ತೆಗೆದುಕೊಳ್ಳುತ್ತಿದ್ದರೆ ಸಿಟಿ ಸ್ಕ್ಯಾನ್‌ಗೆ ಮೊದಲು ಅಥವಾ ನಂತರ ಔಷಧಿ ನಿಲ್ಲಿಸಬೇಕಾ ಎಂಬುದನ್ನು ವೈದ್ಯರ ಬಳಿ ಮಾತನಾಡಿ ನಿರ್ಧರಿಸಿ.
ಮಕ್ಕಳ ಸಿಟಿ ಸ್ಕ್ಯಾನ್ ಮಾಡುವಾಗ ವಿಶೇಷ ಕಾಳಜಿ ವಹಿಸಬೇಕು. ಪುನರಾವರ್ತಿತ ಸಿಟಿ ಸ್ಕ್ಯಾನ್‌ಗಳು ಮಕ್ಕಳ ದೈಹಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತವೆ. ಸಿಟಿ ಸ್ಕ್ಯಾನ್ ಮಾಡಿದ ನಂತರ ಕೆಲವು ಜನರಿಗೆ ಅಲರ್ಜಿಯುಂಟಾಗುತ್ತದೆ.
ವೈದ್ಯರ ಸಲಹೆಯಿಲ್ಲದೆ ಸಿಟಿ ಸ್ಕ್ಯಾನ್ ಮಾಡಿಸಬಾರದು. ಯಾವುದೇ ರೋಗ ಲಕ್ಷಣವಿಲ್ಲದ ವ್ಯಕ್ತಿ ಸಿಟಿ ಸ್ಕ್ಯಾನ್ ಮಾಡಿಸಬಾರದು. ಕೊರೊನಾ ಸೋಂಕಿನ ಎರಡನೇ ದಿನ ಹಾಗೂ ಮೂರನೇ ದಿನದಂದು ಸಿಟಿ ಸ್ಕ್ಯಾನ್ ಮಾಡಿಸಬಾರದು.