ಕೊರೊನಾ ವೈರಸ್ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಿರುತ್ತದೆ. ರೋಗದಿಂದ ಚೇತರಿಸಿಕೊಂಡ ನಂತ್ರವೂ ರೋಗ ನಿರೋಧಕ ಶಕ್ತಿ ಕಡಿಮೆಯಿರುತ್ತದೆ. ಇಂಥ ಸಂದರ್ಭದಲ್ಲಿ ಮಾತ್ರೆ ಜೊತೆ ಯಾವ ಆಹಾರ ಸೇವನೆ ಮಾಡಬೇಕು ಎಂಬುದು ಮುಖ್ಯವಾಗುತ್ತದೆ. ಈ ಸಂದರ್ಭದಲ್ಲಿ ಆಹಾರ ಸೇವನೆ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ.
ವಿಟಮಿನ್ ಡಿ, ವಿಟಮಿನ್ ಸಿ ಮತ್ತು ಸತು ಹೆಚ್ಚಿರುವ ಆಹಾರವನ್ನು ಸೇವನೆ ಮಾಡಬೇಕು. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರೋಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಮನೆಯಲ್ಲಿ ತಯಾರಿಸಿದ ತಾಜಾ ಆಹಾರವನ್ನು ಸೇವಿಸಬೇಕು. ನೆನೆಸಿದ ಬಾದಾಮಿ ಮತ್ತು ಒಣದ್ರಾಕ್ಷಿಗಳೊಂದಿಗೆ ದಿನವನ್ನು ಪ್ರಾರಂಭಿಸಬೇಕು. ಬೆಲ್ಲ ಮತ್ತು ತುಪ್ಪದೊಂದಿಗೆ ರೊಟ್ಟಿ ಸೇವಿಸಬೇಕು. ರಾತ್ರಿ ಊಟಕ್ಕೆ ಖಿಚಡಿ ಸೇವನೆ ಮಾಡಬೇಕು. ಸಾಕಷ್ಟು ನೀರು ಕುಡಿಯಬೇಕು. ಮನೆಯಲ್ಲಿ ತಯಾರಿಸಿದ ಜ್ಯೂಸ್ ಹಾಗೂ ಮಜ್ಜಿಗೆ ಸೇವನೆ ಮಾಡಬೇಕು.
ಮನೆಯಲ್ಲಿ ಒಂಟಿಯಾಗಿದ್ದರೆ ಅಥವಾ ಆಹಾರ ತಯಾರಿಸಲು ಕಷ್ಟವಾಗ್ತಿದ್ದರೂ ಮನೆಯಲ್ಲಿಯೇ ಆಹಾರ ತಯಾರಿಸಿ ಸೇವನೆ ಮಾಡಿ. ಪ್ಯಾಕೇಟ್ ಪದಾರ್ಥಗಳನ್ನು ಸೇವಿಸಬೇಡಿ. ಇದರಲ್ಲಿ ಸೋಡಿಯಂ ಪ್ರಮಾಣ ಹೆಚ್ಚಿದ್ದು, ಉರಿಯೂತವನ್ನು ಹೆಚ್ಚಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಕೊರೊನಾ ಚೇತರಿಕೆ ಅವಧಿಯಲ್ಲಿ ತುಂಬಾ ಬಿಸಿ ಹಾಗೂ ಮಸಾಲೆ ಪದಾರ್ಥವನ್ನು ಸೇವಿಸಬೇಡಿ. ಹಾಗೆ ಕೆಂಪು ಮೆಣಸಿನ ಸೇವನೆ ಮಾಡಬೇಡಿ.
ಚೇತರಿಸಿಕೊಳ್ತಿರುವ ರೋಗಿಗಳ ಬಾಯಿರುಚಿ ಕೆಟ್ಟಿರುತ್ತದೆ. ಇಂಥ ಸಂದರ್ಭದಲ್ಲಿ ಕರಿದ ಪದಾರ್ಥ ಸೇವನೆಗೆ ಮನಸ್ಸಾಗುತ್ತದೆ. ಆದ್ರೆ ಇದು ಕೆಮ್ಮನ್ನು ಹೆಚ್ಚು ಮಾಡುವ ಜೊತೆಗೆ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ. ಇದ್ರಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ.
ನಿಂಬೆ ಹಣ್ಣಿನ ಪಾನಕ, ಎಳನೀರು,ಹಣ್ಣಿನ ರಸವನ್ನು ಸೇವಿಸಬಹುದು. ತಂಪು ಪಾನೀಯ ಹಾಗೂ ಸೋಡಾದಿಂದ ದೂರವಿರಬೇಕು. ಇದು ಉರಿಯೂತವನ್ನು ಉಂಟು ಮಾಡುವ ಜೊತೆಗೆ ಚೇತರಿಕೆ ಗತಿಯನ್ನು ನಿಧಾನಗೊಳಿಸುತ್ತದೆ.