ನೂಡಲ್ಸ್ ಮಕ್ಕಳ ಫೆವರೆಟ್. ಬ್ರೇಕ್ ಫಾಸ್ಟ್ ವೇಳೆ ನೂಡಲ್ಸ್ ತಿನ್ನೋದು ಬೋರ್ ಅನ್ನಿಸಿದ್ರೆ ಅದನ್ನು ಸ್ವಲ್ಪ ಸ್ಪೈಸಿ ಮಾಡಿ. ನೂಡಲ್ಸ್ ಗೆ ಎಗ್ ಸೇರಿಸಿ ಎಗ್ ನೂಡಲ್ಸ್ ರುಚಿ ಸವಿಯಿರಿ.
ಎಗ್ ನೂಡಲ್ಸ್ ಮಾಡಲು ಬೇಕಾಗುವ ಪದಾರ್ಥ:
ನೂಡಲ್ಸ್ – 300 ಗ್ರಾಂ
ಮೊಟ್ಟೆಗಳು – 3
ಶುಂಠಿ ಪೇಸ್ಟ್ – 1/2 ಚಮಚ
ಕರಿಮೆಣಸು – 1/2 ಚಮಚ
ವಿನೆಗರ್ – 1/2 ಚಮಚ
ಸೋಯಾ ಸಾಸ್ – 1 ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಈರುಳ್ಳಿ ಪೇಸ್ಟ್ – 1 ಚಮಚ
ಹಸಿರು ಮೆಣಸಿನಕಾಯಿ – 3 ನುಣ್ಣಗೆ ಕತ್ತರಿಸಿದ್ದು
ಹಸಿರು ತರಕಾರಿ – 1/2 ಕಪ್
ಎಗ್ ನೂಡಲ್ಸ್ ಮಾಡುವ ವಿಧಾನ:
ಮೊದಲು ನೂಡಲ್ಸ್ ಸಿದ್ಧಪಡಿಸಿಕೊಳ್ಳಿ. ಒಂದು ಪಾತ್ರೆಯಲ್ಲಿ ಎಗ್ ಹಾಕಿ ಅದಕ್ಕೆ ಶುಂಠಿ ಪೇಸ್ಟ್, ಈರುಳ್ಳಿ ಪೇಸ್ಟ್ ಹಾಕಿ. ನಂತ್ರ ಪಾತ್ರೆಗೆ ಎಣ್ಣೆ ಹಾಕಿ, ಗ್ಯಾಸ್ ಹಚ್ಚಿ. ಇದಕ್ಕೆ ಎಗ್ ಮಿಶ್ರಣವನ್ನು ಹಾಕಿ, ಸ್ವಲ್ಪ ಸಮಯದವರೆಗೆ ಫ್ರೈ ಮಾಡಿ. ಇನ್ನೊಂದು ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ನೂಡಲ್ಸ್, ವಿನೆಗರ್, ಉಪ್ಪು, ಸೋಯಾ ಸಾಸ್ ಮತ್ತು ಹಸಿ ಮೆಣಸಿನಕಾಯಿಯನ್ನು ಸೇರಿಸಿ ಫ್ರೈ ಮಾಡಿ. ಸುಮಾರು 5 ನಿಮಿಷಗಳ ನಂತ್ರ ಮೊಟ್ಟೆ ಮಿಶ್ರಣವನ್ನು ಇದಕ್ಕೆ ಸೇರಿಸಿ ಬೇಯಿಸಿ ಗ್ಯಾಸ್ ಬಂದ್ ಮಾಡಿ.