ಲಾಕ್ಡೌನ್ ಕಾರಣದಿಂದಾಗಿ ಬ್ಯೂಟಿ ಪಾರ್ಲರ್‌ಗೆ ಹೋಗಲು ಸಾಧ್ಯವಿಲ್ಲ. ಹಾಗಂತ ನಿಮ್ಮ ಸೌಂದರ್ಯದ ಬಗ್ಗೆ ನೀವು ನಿರ್ಲಕ್ಷ್ಯ ಮಾಡಬೇಕೆಂದಲ್ಲ. ಮನೆಯಲ್ಲಿಯೇ ನಿಮ್ಮ ಸೌಂದರ್ಯ ವೃದ್ಧಿಸಿಕೊಳ್ಳಬಹುದು. ಅನೇಕ ದಿನಗಳಿಂದ ಕಾಲುಗಳ ಬಗ್ಗೆ ಗಮನ ಹರಿಸದಿದ್ದರೆ ಈ ಸಮಯದಲ್ಲಿ ಕಾಲಿನ ಸೌಂದರ್ಯ ಹೆಚ್ಚಿಸಿಕೊಳ್ಳಿ. ಮನೆಯಲ್ಲಿ ಸುಲಭವಾಗಿ ಪೆಡಿಕ್ಯೂರ್ ಮಾಡಿಕೊಳ್ಳಿ. ಇದ್ರಿಂದ ಪಾದಗಳಲ್ಲಿರುವ ಡೆಡ್ ಸ್ಕಿನ್ ತೆಗೆದು, ಚರ್ಮ ಮತ್ತು ಉಗುರುಗಳ ಹೊಳಪನ್ನು ಹೆಚ್ಚಿಸಿಕೊಳ್ಳಬಹುದು.
ಪೆಡಿಕ್ಯೂರ್ ಮೊದಲು ನೀವು ಕಾಲಿನ ಬೆರಳಿಗೆ ಹಚ್ಚಿರುವ ನೇಲ್ ಪಾಲಿಶ್ ಕ್ಲೀನ್ ಮಾಡಿ. ನಂತ್ರ ಒಂದು ಬಕೆಟ್ ಗೆ ಉಗುರು ಬೆಚ್ಚಗಿನ ನೀರು ಹಾಕಿ ಅದಕ್ಕೆ ಶಾಂಪೂ ಹಾಕಿ ಕಾಲುಗಳನ್ನು 10 ನಿಮಿಷ ಮುಳುಗಿಸಿ. ನಂತ್ರ ಬ್ರೆಷ್ ಮೂಲಕ ಕಾಲಿನಲ್ಲಿರುವ ಕೊಳಕನ್ನು ಸ್ವಚ್ಛಗೊಳಿಸಿ. ನಂತ್ರ ಟೂತ್ ಪೇಸ್ಟ್ ಹಚ್ಚಿ ಉಗುರುಗಳನ್ನು ಸ್ವಚ್ಛಗೊಳಿಸಿ. ನೀರಿನಿಂದ ಕಾಲು ತೆಗೆದು, ಉಗುರುಗಳನ್ನು ಕತ್ತರಿಸಿ, ಸ್ವಚ್ಛಗೊಳಿಸಿ.
ನಂತ್ರ ಕಾಲನ್ನು ಸ್ಕ್ರಬ್ ಮಾಡಿಕೊಳ್ಳಿ. ಸ್ಕ್ರಬ್ ಮಾಡಲು ಹಾಲಿಗೆ ಒಂದು ಟೀ ಚಮಚ ಸಕ್ಕರೆ ಮತ್ತು ಒಂದು ಟೀ ಚಮಚ ಉಪ್ಪು ಮತ್ತು ಒಂದು ಚಮಚ ಆಲಿವ್ ಅಥವಾ ಬಾದಾಮಿ ಎಣ್ಣೆಯನ್ನು ಸೇರಿಸಿ. ಈ ಮಿಶ್ರಣದಿಂದ ಪಾದಗಳ ಚರ್ಮ ಮತ್ತು ಪಾದಗಳನ್ನು ಕೈಗಳಿಂದ ಸ್ಕ್ರಬ್ ಮಾಡಿ. ಇದು ಡೆಡ್ ಸ್ಕಿನ್ ತೆಗೆಯುತ್ತದೆ. ನಂತ್ರ ಪಾದಗಳನ್ನು ಶುದ್ಧ ನೀರಿನಿಂದ ತೊಳೆಯಿರಿ.
ಪಾದಗಳನ್ನು ತೊಳೆದ ನಂತ್ರ ಟೆವೆಲ್ ನಿಂದ ಚೆನ್ನಾಗಿ ಒರೆಸಿಕೊಳ್ಳಿ. ಈಗ ಎರಡು ಚಮಚ ಮುಲ್ತಾನಿ ಮಿಟ್ಟಿ ಪುಡಿ, ಎರಡು ಚಿಟಕಿ ಅರಿಶಿನ ಮತ್ತು ಎರಡು ಚಮಚ ಮೊಸರು ಸೇರಿಸಿ ದಪ್ಪ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಪ್ಯಾಕ್‌ನಂತೆ ಪಾದಗಳಿಗೆ ಹಚ್ಚಿ ಒಣಗಲು ಬಿಡಿ. ಪ್ಯಾಕ್ ಒಣಗಿದಾಗ ಪಾದಗಳನ್ನು ಶುದ್ಧ ನೀರಿನಿಂದ ತೊಳೆಯಿರಿ. ನಂತ್ರ ಮಾಯಿಶ್ಚರೈಸರ್ ಹಚ್ಚಿ ಮತ್ತು ಪಾದಗಳನ್ನು ಎರಡು ನಿಮಿಷಗಳ ಕಾಲ ಮಸಾಜ್ ಮಾಡಿ. ಮಾಯಿಶ್ಚರೈಸರ್ ಬದಲಿಗೆ ತೆಂಗಿನ ಎಣ್ಣೆ ಅಥವಾ ಬಾದಾಮಿ ಎಣ್ಣೆ ಸಹ ಬಳಸಬಹುದು.