ಹಣ್ಣು ಕೇವಲ ತಿನ್ನಲು ಯೋಗ್ಯ ಮಾತ್ರವಲ್ಲದೇ ತ್ವಚೆಯ ಆರೋಗ್ಯ ಕಾಪಾಡುವಲ್ಲಿಯೂ ಸಹಕಾರಿ. ಇಂತಹದ್ದೇ ಹಣ್ಣುಗಳ ಸಾಲಿನಲ್ಲಿ ಕಲ್ಲಂಗಡಿ ಕೂಡ ಬರುತ್ತೆ.
ಬೇಸಿಗೆಯ ಸಮಯದಲ್ಲಿ ಸೂರ್ಯನ ಕಿರಣಗಳಿಂದ ಕಾಪಾಡಿಕೊಳ್ಳಲು ನೀವು ಕಲ್ಲಂಗಡಿ ಹಣ್ಣನ್ನ ಬಳಕೆ ಮಾಡಬಹುದು. ಕಲ್ಲಂಗಡಿ ಹಣ್ಣಿನ ಸಹಾಯದಿಂದ ಮನೆಯಲ್ಲೇ ನೀವು ಸುಲಭವಾಗಿ ಫೇಸ್ ಪ್ಯಾಕ್ಗಳನ್ನ ತಯಾರಿಸಬಹುದು. ಈ ರೀತಿ ಮಾಡೋದ್ರಿಂದ ಕೆಲವೇ ಸಮಯದಲ್ಲಿ ಕಾಂತಿಯುತ ತ್ವಚೆಯನ್ನ ಹೊಂದುತ್ತೀರಿ.
ಕಲ್ಲಂಗಡಿ ಹಾಗೂ ಸೌತೆಕಾಯಿಗಳೆರಡೂ ತ್ವಚೆಯ ಆರೋಗ್ಯಕ್ಕೆ ತುಂಬಾನೇ ಸಹಕಾರಿ. ಬೇಸಿಗೆ ಸಮಯದಲ್ಲಿ ಬಿಸಿಲಿನ ಧಗೆಯಿಂದಾಗಿ ಮುಖದಲ್ಲಿ ಟ್ಯಾನ್ ಆಗುತ್ತೆ. ಇದನ್ನ ಸರಿ ಮಾಡಿಕೊಳ್ಳಲು ನೀವು ಕಲ್ಲಂಗಡಿ ಹಾಗೂ ಸೌತೆಕಾಯಿಯ ರಸವನ್ನ ಮಿಶ್ರಣ ಮಾಡಿ ಮುಖಕ್ಕೆ ಫೇಸ್ ಮಾಸ್ಕ್ ಮಾಡಿಕೊಳ್ಳಿ. 15-20 ನಿಮಿಷ ಬಿಟ್ಟು ತಣ್ಣನೆಯ ನೀರಿನಿಂದ ಮುಖವನ್ನ ತೊಳೆದುಕೊಳ್ಳಿ. ಇದರಿಂದ ನೀವು ಟ್ಯಾನ್ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.
ಕಲ್ಲಂಗಡಿ ರಸ ಹಾಗೂ ಮೊಸರನ್ನ ಮಿಶ್ರಣ ಮಾಡಿ ಮುಖಕ್ಕೆ ಹಚ್ಚೋದ್ರಿಂದ ನಿಮ್ಮ ತ್ವಚೆಯ ಕಾಂತಿ ಹೆಚ್ಚಲಿದೆ. ಈ ಮಾಸ್ಕ್ನ್ನ ತಯಾರು ಮಾಡಲು 2 ದೊಡ್ಡ ಚಮಚ ಕಲ್ಲಂಗಡಿ ಹಣ್ಣಿನ ರಸಕ್ಕೆ ಮೊಸರನ್ನ ಹಾಕಿ. ಇದನ್ನ ಚೆನ್ನಾಗಿ ಮಿಶ್ರಣ ಮಾಡಿ ನಿಮ್ಮ ಮುಖಕ್ಕೆ ಹಚ್ಚಿ. 15- 20 ನಿಮಿಷ ಹಾಗೆಯೇ ಬಿಡಿ. ಇದಾದ ಬಳಿಕ ತಣ್ಣನೆಯ ನೀರಿನಿಂದ ನಿಮ್ಮ ಮುಖವನ್ನ ತೊಳೆದುಕೊಳ್ಳಿ.
ಹಾಲು ಒಂದು ನೈಸರ್ಗಿಕ ಕ್ಲೆನ್ಸರ್ ಆಗಿದ್ದು ಮುಖದಲ್ಲಿನ ಕೊಳೆಯನ್ನ ಹೋಗಲಾಡಿಸಲು ಸಹಕಾರಿ. ಇಷ್ಟು ಮಾತ್ರವಲ್ಲದೇ ಮುಖವನ್ನ ಮಾಯಿ ಶ್ಚರೈಸ್ ಮಾಡುತ್ತೆ. ಕಲ್ಲಂಗಡಿ ರಸಕ್ಕೆ 2 ದೊಡ್ಡ ಚಮಚ ಹಸಿ ಹಾಲನ್ನ ಹಾಕಿ. ಈ ಮಿಶ್ರಣವನ್ನ ಚೆನ್ನಾಗಿ ಕಲಿಸಿ. ಇದನ್ನ ಮುಖ ಹಾಗೂ ಕುತ್ತಿಗೆಗೆ ಸರಿಯಾಗಿ ಹಚ್ಚಿಕೊಳ್ಳಿ. 15 ನಿಮಿಷ ಬಿಟ್ಟು ಮುಖವನ್ನ ಸರಿಯಾಗಿ ತೊಳೆದುಕೊಳ್ಳಿ. ಇದರಿಂದ ನಿಮ್ಮ ಮುಖದ ಕಾಂತಿ ಹೆಚ್ಚೋದ್ರಲ್ಲಿ ಯಾವುದೇ ಸಂದೇಹವಿಲ್ಲ.