ಬೇಸಿಗೆಯಲ್ಲಿ ಅನೇಕ ಹುಡುಗಿಯರು ಮುಖ ಹಾಗೂ ತಮ್ಮ ಕೈಗಳ ಬಗ್ಗೆ ಕಾಳಜಿ ವಹಿಸ್ತಾರೆ. ಬಿಸಿಲಿಗೆ ಹೋಗುವ ಮೊದಲು ಮುಖವನ್ನು ಕವರ್ ಮಾಡಿಕೊಳ್ತಾರೆ. ಮುಖ ಹಾಗೂ ಕೈಗಳಿಗೆ ಲೋಷನ್ ಹಚ್ಚಿಕೊಳ್ತಾರೆ. ಆದ್ರೆ ಕಾಲುಗಳನ್ನು ಮರೆತು ಬಿಡ್ತಾರೆ.
ಬಿಸಿಲಿನಲ್ಲಿ ತುಂಬಾ ಹೊತ್ತು ನಿಲ್ಲುವುದರಿಂದ ನಮ್ಮ ಕಾಲುಗಳು ಕೂಡ ಸೌಂದರ್ಯ ಕಳೆದುಕೊಳ್ಳತ್ತವೆ. ಬಿಸಿಲಿನಲ್ಲಿರುವ ಕಾಲುಗಳು ಒಂದು ಬಣ್ಣ ಹಾಗೂ ಚಪ್ಪಲಿಯಿಂದ ಮುಚ್ಚಿರುವ ಕಾಲುಗಳು ಒಂದು ಬಣ್ಣ ಪಡೆದಿರುತ್ತವೆ. ಚಪ್ಪಲಿ ತೆಗೆದಾಗ ಪಾದಗಳ ಮೇಲಾಗಿರುವ ಕಲೆ ಎದ್ದು ಕಾಣುತ್ತದೆ.
ಕಾಲಿನ ಟ್ಯಾನಿಂಗ್ ತೆಗೆದು ಹಾಕಲು ನೀವು ಮನೆಯಲ್ಲಿರುವ ವಸ್ತುಗಳನ್ನೇ ಬಳಸಿಕೊಳ್ಳಬಹುದು. ಅಡುಗೆ ಮನೆಯಲ್ಲಿರುವ ಟೋಮೋಟೋ ನಿಮ್ಮ ಕಾಲಿನ ಮೇಲಾಗಿರುವ ಕಲೆಯನ್ನು ತೆಗೆದು ಹಾಕುತ್ತದೆ. ಟೋಮೋಟೋದಲ್ಲಿರುವ ಲೈಕೊಪೀನ್ ಚರ್ಮದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.
ವಿಟಮಿನ್ ಸಿ ಮತ್ತು ಎಂಟಿಆಕ್ಸಿಡೆಂಟ್ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಚರ್ಮದ ಡೆಡ್ ಸ್ಕಿನ್ ತೆಗೆದು ಹಾಕುವ ಜೊತೆಗೆ ಕಲೆಯನ್ನು ದೂರ ಮಾಡುತ್ತದೆ.
ಟೋಮೋಟೋ ಮಿಕ್ಸ್ ಮಾಡಲು ಬೇಕಾಗುವ ಪದಾರ್ಥ:
ಒಂದು ಟಬ್ ಬಿಸಿ ನೀರು
1 ಚಮಚ ಉಪ್ಪು
2 ಚಮಚ ಶಾಂಪೂ
1 ಚಮಚ ಕಡಲೆ ಹಿಟ್ಟು
2 ಚಮಚ ಟೋಮೋಟೋ ಹಣ್ಣಿನ ತಿರುಳು
2 ಚಮಚ ಗುಲಾಬಿ ನೀರು
ಮೊದಲು ನೀರಿಗೆ ಉಪ್ಪು ಹಾಗೂ ಶಾಂಪೂ ಹಾಕಿ. ಇದಾದ ನಂತ್ರ ನಿಮ್ಮ ಪಾದವನ್ನು ಈ ನೀರಿನಲ್ಲಿ 20 ನಿಮಿಷಗಳ ಕಾಲ ಇಟ್ಟುಕೊಳ್ಳಿ. ನಂತ್ರ ಕಾಲನ್ನು ಬೇರೆ ನೀರಿನಲ್ಲಿ ಕ್ಲೀನ್ ಮಾಡಿ ಟೋಮೋಟೋ, ಹಿಟ್ಟು ಹಾಗೂ ಗುಲಾಬಿ ನೀರನ್ನು ಮಿಕ್ಸ್ ಮಾಡಿ ಅದನ್ನು ಕಾಲಿಗೆ ಹಚ್ಚಿಕೊಳ್ಳಿ. ಕೆಲ ಸಮಯ ಬಿಟ್ಟು ಕಾಲನ್ನು ಸ್ವಚ್ಛಗೊಳಿಸಿ.