ಈಗಂತೂ ಸೆಕೆಗಾಲ. ಬೆವರು, ಜಿಡ್ಡು ಸಾಮಾನ್ಯ. ಹಾಗಾಗಿ ಹೊರಗೆ ಹೋಗಬೇಕೆಂದರೆ ಪರ್ಫ್ಯೂಮ್ ಬೇಕೆ ಬೇಕು. ಆದ್ರೆ ಯಾವ ವಿಧದ ಸುಗಂಧ ದ್ರವ್ಯ ಆಯ್ಕೆ ಮಾಡಿಕೊಳ್ಳಬೇಕು…? ಯಾವುದು ಬೆಸ್ಟ್ ಅನ್ನೋ ಗೊಂದಲದಲ್ಲಿದ್ದೀರಾ? ಹಾಗಿದ್ರೆ ಇಲ್ಲಿದೆ ಅದಕ್ಕೆ ಸಿಂಪಲ್ ಟಿಪ್ಸ್.
ಸಿಟ್ರಸ್ ಉಳ್ಳ ಸುಗಂಧ ದ್ರವ್ಯವಾದರೆ ಸೆಕೆಗಾಲದಲ್ಲಿ ತ್ವಚೆಗೂ ಒಳ್ಳೆಯದು. ಅಲ್ಲದೇ ಹೊರಗೆ ಹೋಗುವಾಗ ಅದನ್ನು ಕೊಂಡೊಯ್ಯಲು ಮರೆಯಬೇಡಿ.
ಮಹಿಳೆಯರು ತಾಜಾ ಹೂವು, ಹಣ್ಣುಗಳ ಸುಗಂಧವುಳ್ಳ ಸೆಂಟ್ ಆಯ್ಕೆ ಮಾಡಿಕೊಳ್ಳಿ.
ಪುರುಷರು ಹೆಚ್ಚು ಜಲವಾಸಿ ಸುಗಂಧದ್ರವ್ಯ ಬಳಸಿದರೆ ಒಳ್ಳೆಯದು.
ಸದಾ ಯಂಗ್ ಆಗಿ ಕಾಣುವ ಸೀಕ್ರೆಟ್ ಇಲ್ಲಿದೆ….!
ಹೆಚ್ಚಾಗಿ ನೈಸಕರ್ಗಿಕವಾದ ಸುಗಂಧವುಳ್ಳ ದ್ರಾಕ್ಷಿ, ಬೆಣ್ಣೆ ಹಣ್ಣಿನ ಪರಿಮಳವುಳ್ಳ ಪರ್ಫ್ಯೂಮ್ ಬಳಸಿ.
ನಿಮ್ಮ ಚರ್ಮದ ಗುಣಕ್ಕನುಗುಣವಾಗಿ ಸೆಂಟ್ ಬಳಸಿ. ಇದು ನಿಮ್ಮ ವ್ಯಕ್ತಿತ್ವವನ್ನು ಹೊರ ಸೂಸುತ್ತದೆ.
ಹವಾಮಾನಕ್ಕನುಗುಣವಾಗಿ ಪರ್ಫ್ಯೂಮ್ ಗಳನ್ನು ಆಯ್ಕೆ ಮಾಡಿಕೊಳ್ಳಿ.