ನಾವು ಮುಖದ ಅಲಂಕಾರಕ್ಕೆ ಗಂಟೆಗಟ್ಟಲೆ ಸಮಯ ವ್ಯಯಿಸ್ತೇವೆ. ಆದ್ರೆ ನಮ್ಮ ಕೈಕಾಲುಗಳ ಕಡೆಗೆ ಗಮನವನ್ನೇ ಕೊಡುವುದಿಲ್ಲ. ಇಷ್ಟು ದಿನ ಅಂತೂ ನೀವು ಕೈ-ಕಾಲುಗಳನ್ನು ನಿರ್ಲಕ್ಷ್ಯ ಮಾಡಿದ್ದೀರಾ, ಇನ್ಮೇಲಾದ್ರೂ ಹಾಗ್ಮಾಡ್ಬೇಡಿ. ನಿಮ್ಮ ಅಡುಗೆ ಮನೆಯಲ್ಲೇ ಸಿಗುವ ವಸ್ತುಗಳಿಂದ ಕೇವಲ 7 ದಿನಗಳಲ್ಲಿ ನೀವು ಅವುಗಳ ಅಂದವನ್ನು ಹೆಚ್ಚಿಸಬಹುದು.
ನಿಂಬೆರಸ ಮತ್ತು ಸೌತೆಕಾಯಿ ಜ್ಯೂಸ್ ಸೇರಿಸಿ ಕೈಕಾಲುಗಳಿಗೆ ಹಚ್ಚಿಕೊಂಡು 10 ನಿಮಿಷ ಬಿಟ್ಟು ತೊಳೆಯಿರಿ.
ಬಾದಾಮಿ ಎಣ್ಣೆ ಮತ್ತು ಅಲೋವೆರಾವನ್ನು ಮಿಕ್ಸ್ ಮಾಡಿ ಕೈಕಾಲುಗಳಿಗೆ ಸವರಿಕೊಂಡು 1 ಗಂಟೆ ಬಿಟ್ಟು ತೊಳೆದರೆ ಸನ್ ಬರ್ನ್ ಮಾಯವಾಗುತ್ತದೆ.
ಒಂದು ಚಮಚ ರೋಸ್ ವಾಟರ್ ಗೆ 4 ಚಮಚ ಮೊಸರು ಸೇರಿಸಿ ಕೈ ಮತ್ತು ಕಾಲಿಗೆ ಚೆನ್ನಾಗಿ ಮಸಾಜ್ ಮಾಡಿ 30 ನಿಮಿಷ ಬಿಟ್ಟು ತೊಳೆದುಕೊಳ್ಳಿ.
ಎಳನೀರಿನಿಂದ ಕೈ, ಕಾಲುಗಳಿಗೆ ಮಸಾಜ್ ಮಾಡಿಕೊಂಡರೆ ಹೊಳಪು ಬರುತ್ತದೆ.
3 ಚಮಚ ಅಕ್ಕಿ ಹಿಟ್ಟು, ಸ್ವಲ್ಪ ಅರಿಶಿನ, ಎರಡು ಹನಿ ನಿಂಬೆರಸ ಸೇರಿಸಿ ಕೈ ಕಾಲುಗಳಿಗೆ ಹಚ್ಚಿಕೊಳ್ಳಿ, ಇದರಿಂದ ನಿಮ್ಮ ಚರ್ಮ ಮೃದುವಾಗುತ್ತದೆ.
ನಿಂಬೆಹಣ್ಣಿನ ಸಿಪ್ಪೆಯಿಂದ ಕೈ ಮತ್ತು ಕಾಲುಗಳಿಗೆ ಉಜ್ಜಿಕೊಂಡು 10 ನಿಮಿಷ ಬಿಟ್ಟು ತೊಳೆಯಿರಿ.
ಹಾಲಿನಿಂದ 10 ನಿಮಿಷ ಮಸಾಜ್ ಮಾಡಿಕೊಂಡು ತೊಳೆದರೆ ನಿಮ್ಮ ಕೈ ಮತ್ತು ಕಾಲುಗಳು ಬೆಳ್ಳಗಾಗುತ್ತವೆ.