ಇಂದಿನ ದಿನಗಳಲ್ಲಿ ಅನವಶ್ಯಕ ಕೂದಲು ಸಮಸ್ಯೆ ಮಹಿಳೆಯರಿಗೆ ಮಾಮೂಲಿಯಾಗಿದೆ. ಮುಖ ಹಾಗೂ ಕೈ, ಕಾಲಿನ ಮೇಲಿನ ಕೂದಲನ್ನು ತೆಗೆಯಲು ಮಹಿಳೆಯರು ಪ್ರತಿ ವಾರ ನೂರಾರು ರೂಪಾಯಿ ಖರ್ಚು ಮಾಡ್ತಾರೆ. ಬ್ಯೂಟಿ ಪಾರ್ಲರ್ ಗೆ ಹೋಗಿ ಹೋಗಿ ಸುಸ್ತಾಗ್ತಾರೆ.
ಶಾಶ್ವತವಾಗಿ ಕೂದಲು ತೊಡೆದು ಹಾಕುವ ಪ್ರಯತ್ನಕ್ಕೂ ಮಹಿಳೆಯರು ಕೈ ಹಾಕ್ತಾರೆ. ಇದಕ್ಕಾಗಿ ಲೇಸರ್ ಚಿಕಿತ್ಸೆ ಮಾಡಿಸಿಕೊಳ್ತಾರೆ. ಆದ್ರೆ ಲೇಸರ್ ಚಿಕಿತ್ಸೆಯಿಂದ ಅಡ್ಡ ಪರಿಣಾಮವುಂಟಾಗುವುದು ಜಾಸ್ತಿ. ಹಾಗಾಗಿ ಮನೆಯಲ್ಲಿಯೇ ಸಣ್ಣ ಉಪಾಯವನ್ನು ಮಾಡಿ ಅನವಶ್ಯಕ ಕೂದಲು ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಈ ಮನೆ ಮದ್ದಿನಲ್ಲಿ ಖನಿಜ, ಜೀವಸತ್ವ ಅಪಾರ ಪ್ರಮಾಣದಲ್ಲಿ ಕಂಡು ಬರುತ್ತದೆ. ನಿಮ್ಮ ಚರ್ಮ ಮೃದುವಾಗಿ ಹೊಳಪು ಪಡೆಯುತ್ತದೆ.
ಮನೆ ಮದ್ದಿಗೆ ಬೇಕಾಗುವ ಸಾಮಗ್ರಿ :
ಎರಡು ಚಮಚ ಜೇನುತುಪ್ಪ
ಒಂದು ಚಮಚ ಓಟ್ಮಿಲ್ ಪೇಸ್ಟ್
ಎರಡು ಚಮಚ ನಿಂಬೆ ರಸ
ಮನೆ ಮದ್ದು ಮಾಡುವ ವಿಧಾನ : ಜೇನುತುಪ್ಪ, ಓಟ್ಮಿಲ್ ಪೇಸ್ಟ್ ಹಾಗೂ ನಿಂಬೆ ರಸವನ್ನು ಸೇರಿಸಿ ದಪ್ಪ ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ಸರಿಯಾಗಿ ಹಚ್ಚಿ. ಸುಮಾರು 15 ನಿಮಿಷಗಳ ನಂತ್ರ ಬೆಚ್ಚನೆ ನೀರಿನಲ್ಲಿ ಮುಖ ತೊಳೆಯಿರಿ. ವಾರದಲ್ಲಿ ಸುಮಾರು 2-3 ಬಾರಿ ಹೀಗೆ ಮಾಡಿ.