ಕೂದಲುದುರುವುದು ಇತ್ತೀಚಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿದೆ. ಅದ್ರಲ್ಲೂ ಬೋಳು ತಲೆ ಸಮಸ್ಯೆಯಿಂದ ಅನೇಕರು ಬಳಲುತ್ತಿದ್ದಾರೆ. ನಿಧಾನವಾಗಿ ತಲೆ ಮೇಲಿನ ಕೂದಲೆಲ್ಲ ಉದುರಿ ಬೊಕ್ಕುತಲೆ ಸಮಸ್ಯೆ ಎದುರಾಗುತ್ತದೆ. ಬೊಕ್ಕು ತಲೆ ಸಮಸ್ಯೆಯಿಂದ ಬಳಲುತ್ತಿರುವವರು ಇನ್ಮುಂದೆ ಚಿಂತೆ ಮಾಡಬೇಕಾಗಿಲ್ಲ.
ಥೈಲ್ಯಾಂಡ್ ಸಂಶೋಧಕರು ಇದಕ್ಕೆ ಮದ್ದು ಕಂಡು ಹಿಡಿದಿದ್ದಾರೆ. ಮ್ಯಾಂಗ್ರೋವ್ ಮರದ ಅರ್ಕ ಇದಕ್ಕೆ ಉತ್ತಮ ಔಷಧಿ ಎಂದು ಸಂಶೋಧಕರು ಹೇಳಿದ್ದಾರೆ. ಇದನ್ನು Avicequinon C ಎಂದು ಕರೆಯಲಾಗುತ್ತದೆ.
ಚುಲಲಾಂಗ್ ಕಾರ್ನ್ ವಿಶ್ವವಿದ್ಯಾನಿಲಯದ ಸಂಶೋಧಕರು ಈ ಬಗ್ಗೆ ಸಂಶೋಧನೆ ಮಾಡಿದ್ದಾರೆ. 50 ಪುರುಷರು ಹಾಗೂ ಕೆಲ ಮಹಿಳೆಯರ ಮೇಲೆ ಈ ಸಂಶೋಧನೆ ನಡೆದಿದೆ. ಸಂಶೋಧನೆಯಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಕೂದಲು ಉದುರಲು ಮುಖ್ಯ ಕಾರಣವಾದ ಆಂಡ್ರೊಜೆನ್ ಅಲೋಪೆಸಿಯಾದಿಂದ ಬಳಲುತ್ತಿದ್ದರು.
ಕೂದಲುದುರುವ ಸಮಸ್ಯೆಗೆ ಇಲ್ಲಿದೆ ʼಪರಿಹಾರʼ
ಈ ಚಿಕಿತ್ಸೆ ನಂತ್ರ ಕೂದಲು ಉದುರುವ ಸಮಸ್ಯೆ ಕಡಿಮೆಯಾಗಿದ್ದಲ್ಲದೆ ಕೂದಲು ಬಲಗೊಂಡಿತ್ತು. ಬೋಳು ತಲೆ ಹೊಂದಿರುವವರಿಗೂ ಈ ಚಿಕಿತ್ಸೆ ಪ್ರಯೋಜನಕಾರಿಯಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ. ಕೂದಲು ಉದುರಲು ಕಾರಣವಾಗುವ ಹಾರ್ಮೋನ್ ಗಳು ಬಿಡುಗಡೆಯಾಗದಂತೆ ಈ ಮ್ಯಾಂಗ್ರೋವ್ ಮರದ ಅರ್ಕ ತಡೆಯುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಅಲ್ಲದೆ ಕೂದಲ ಬೆಳೆಯಲು ಸಹಾಯವಾಗುವ ಪ್ರೊಟೀನ್ ಬಿಡುಗಡೆ ಮಾಡುತ್ತದೆ.