ಕಾಂತಿಯುತ ತ್ವಚೆ ಬೇಕೆಂದರೆ ಕಾಲಕ್ಕೆ ತಕ್ಕಂತೆ ತ್ವಚೆ ಆರೈಕೆ ಮಾಡಬೇಕು. ಬೇಸಿಗೆಯಲ್ಲಿ ತ್ವಚೆ ಆರೈಕೆಯನ್ನು ಈ ರೀತಿ ಮಾಡುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.
ಬೇಸಿಗೆ ಕಾಲದಲ್ಲಿ ಇರಲೇಬೇಕಾದ ಸೌಂದರ್ಯವರ್ಧಕಗಳಲ್ಲಿ ಒಂದು ವಾಟರ್ ಬೇಸ್ಡ್ ಸೆರಮ್ಸ್. ಇದು ಯೌವನದ ಕಳೆಯನ್ನು ಕಾಪಾಡುವಲ್ಲಿ ಸಹಕಾರಿ. ಜೊತೆಗೆ ಕ್ಲೆನ್ಸಿಂಗ್, ಟೋನಿಂಗ್, ಮಾಯಿಶ್ಚರೈಸ್ ಮಾಡುವುದರಿಂದ ತ್ವಚೆ ಕಾಂತಿಯುತವಾಗಿರುತ್ತದೆ. ಬಿಸಿಲಿಗೆ ಹೋಗುವ 20 ನಿಮಿಷ ಮುಂಚೆ ಸನ್‌ಸ್ಕ್ರೀನ್ ಹಚ್ಚುವುದರಿಂದ ಸನ್‌ಟ್ಯಾನ್ ತಡೆಯಬಹುದು.
ಬೇಸಿಗೆಯಲ್ಲಿ ತಿಂಗಳಿಗೊಮ್ಮೆ ಫ್ರೂಟ್ ಫೇಶಿಯಲ್ ಮಾಡಿಸುವುದು ಸೂಕ್ತ. ಇವೆಲ್ಲಕ್ಕಿಂತ ಬಹು ಮುಖ್ಯವಾದ ಅಂಶವೆಂದರೆ ಸಾಕಷ್ಟು ನೀರು ಕುಡಿಯಬೇಕು. ದಿನದಲ್ಲಿ 8 ಲೋಟ ನೀರು ತಪ್ಪದೆ ಕುಡಿಯಬೇಕು. ಇದು ಸೌಂದರ್ಯಕ್ಕೆ ಮಾತ್ರವಲ್ಲ ಆರೋಗ್ಯಕ್ಕೂ ಅವಶ್ಯಕ.
ನಮ್ಮ ಆಹಾರ ಪದ್ಧತಿ ಸೌಂದರ್ಯದ ಮೇಲೆ ನೇರ ಪರಿಣಾಮ ಬೀರುವುದರಿಂದ ತ್ವಚೆ ಕಾಂತಿಗೆ ಆರೋಗ್ಯಕರ ಆಹಾರ ಪದ್ಧತಿ ಒಳ್ಳೆಯದು.