ಬೇಸಿಗೆಯಲ್ಲಿ ಚರ್ಮದ ಬಗ್ಗೆ ನೀವು ಹೆಚ್ಚಿನ ಕಾಳಜಿ ವಹಿಸಬೇಕು. ಯಾಕಂದ್ರೆ ಬಿಸಿಲು, ಬೆವರು ಮತ್ತು ಹ್ಯೂಮಿಡಿಟಿ ಜಾಸ್ತಿ ಇರೋದ್ರಿಂದ ಚರ್ಮಕ್ಕೆ ಬೇಗ ಹಾನಿಯಾಗುತ್ತದೆ.
ಸನ್ ಬರ್ನ್ ಹಾಗೂ ಡ್ರೈ ಸ್ಕಿನ್ ಸಮಸ್ಯೆ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಅತಿಯಾದ ಬೆವರುವಿಕೆಯಿಂದ ಮೊಡವೆಗಳು ಏಳಬಹುದು. ಅದರಿಂದ ಪಾರಾಗಲು ಕೆಲವು ಸಿಂಪಲ್ ಟಿಪ್ಸ್ ಇಲ್ಲಿದೆ.
ಮೊಡವೆಗೆ ಕಾರಣವಾಗುವ ಆಹಾರದಿಂದ ದೂರವಿರಿ : ಬೇಸಿಗೆಯಲ್ಲಿ ಐಸ್ ಕ್ರೀಮ್, ಚಾಕಲೇಟ್, ಕೇಕ್ ಮತ್ತು ಪಿಜ್ಜಾಗಳನ್ನು ತಿನ್ನಬೇಡಿ. ಯಾಕಂದ್ರೆ ಮೊಡವೆಯಿಂದ ಪಾರಾಗಲು ಸಕ್ಕರೆ ಮತ್ತು ಮೈದಾದಿಂದ ನೀವು ದೂರವಿರಬೇಕು.
ಫೈಬರ್ ಅಂಶ ಹೆಚ್ಚಾಗಿರುವ ಫುಡ್ ತಿನ್ನಿ : ಕಲ್ಲಂಗಡಿ, ಕರಬೂಜ, ಕಿತ್ತಳೆ ಹಣ್ಣುಗಳನ್ನು ಬೇಸಿಗೆಯಲ್ಲಿ ಸೇವಿಸುವುದು ಉತ್ತಮ. ಇದರಿಂದ ಮಲಬದ್ಧತೆ ಕಡಿಮೆಯಾಗಿ ಮೊಡವೆಗಳು ಕೂಡ ದೂರವಾಗುತ್ತವೆ.
ಚಾಕಲೇಟ್ ನಿಂದ ಲಭ್ಯವಾಗುತ್ತೆ ಹೊಳೆಯುವ ತ್ವಚೆ
ಮುಖವನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ : ಬೇಸಿಗೆಯಲ್ಲಿ ದಿನಕ್ಕೆ ಕನಿಷ್ಟ ಎರಡು ಬಾರಿ ಮುಖ ತೊಳೆದುಕೊಳ್ಳಿ. ಯಾಕಂದ್ರೆ ಮುಖದ ಮೇಲೆ ಧೂಳು ಮತ್ತು ಎಣ್ಣೆಯ ಅಂಶ ಹೆಚ್ಚಾಗಿರುತ್ತದೆ. ಡೆಡ್ ಸ್ಕಿನ್ ಗಳನ್ನು ತೆಗೆದುಹಾಕಿ ಮುಖದ ಮೇಲಿನ ರಂಧ್ರಗಳನ್ನು ಸ್ವಚ್ಛ ಮಾಡಲು ವಾರಕ್ಕೊಮ್ಮೆ ಒಳ್ಳೆಯ ಕ್ಲೆನ್ಸಿಂಗ್ ಬಳಸಿ. ಟೀ ಟ್ರೀ ಎಣ್ಣೆ ಮೊಡವೆಗಳನ್ನು ದೂರವಿಡಲು ನೆರವಾಗುತ್ತದೆ.
ಮಾಯಿಶ್ಚರೈಸರ್ ಆಯ್ಕೆ ಸರಿಯಾಗಿರಲಿ : ಬೇಸಿಗೆಯಲ್ಲಿ ಮುಖದಲ್ಲಿ ತೇವಾಂಶ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ. ಹಾಗಾಗಿ ಸೂಕ್ತವಾದ ಮಾಯಿಶ್ಚರೈಸಿಂಗ್ ಲೋಶನ್ ಬಳಸಿ. ನೀವು ಬಳಸುವ ಸೌಂದರ್ಯವರ್ಧಕಗಳಲ್ಲಿ ಯಾವ ಯಾವ ಉತ್ಪನ್ನಗಳಿವೆ ಅನ್ನೋದನ್ನು ತಪ್ಪದೇ ಗಮನಿಸಿ.
ಚಿಕಿತ್ಸೆಯ ಮೊರೆಹೋಗಿ : ಮೊಡವೆಗಳ ಸಮಸ್ಯೆ ಮಿತಿಮೀರುತ್ತಿದೆ ಎನಿಸಿದಲ್ಲಿ ಆದಷ್ಟು ಬೇಗ ವೈದ್ಯರನ್ನು ಕಾಣುವುದು ಉತ್ತಮ. ವೈದ್ಯರು ನಿಮ್ಮ ಮೊಡವೆ ಸಮಸ್ಯೆಗೆ ಪರಿಹಾರ ಸೂಚಿಸುತ್ತಾರೆ.