ಕೆಲವರ ಪಾದದಿಂದ ಕೆಟ್ಟ ವಾಸನೆ ಬರುತ್ತದೆ. ಚಳಿಗಾಲದಲ್ಲಿ, ಮಳೆಗಾಲದಲ್ಲಿ ಇದು ಜಾಸ್ತಿ. ಯಾಕೆಂದ್ರೆ ಚಳಿಗಾಲದಲ್ಲಿ ನಾವು ಹೆಚ್ಚಿನ ಸಮಯವನ್ನು ಶೂ ಹಾಕಿಕೊಂಡೇ ಇರ್ತೇವೆ.
ಆಗ ಕಾಲು ಬೆವರಿ ವಾಸನೆ ಬರಲು ಶುರುವಾಗುತ್ತದೆ. ಇದರಿಂದ ಕಿರಿಕಿರಿ ಶುರುವಾಗುತ್ತದೆ. ಎಷ್ಟು ಬಾರಿ ಕಾಲು ತೊಳೆದ್ರೂ ವಾಸನೆ ಮಾತ್ರ ಹೋಗೋದಿಲ್ಲ. ಬೇರೆಯವರೆದುರು ಮುಜುಗರವುಂಟಾಗುವುದುಂಟು. ನಿಮ್ಮ ಪಾದದಿಂದಲೂ ಈ ವಾಸನೆ ಬರ್ತಾ ಇದ್ದರೆ ಸುಲಭವಾಗಿ ಅದಕ್ಕೆ ಗುಡ್ ಬೈ ಹೇಳಿ.
ಟೀ ಎಲೆಗಳನ್ನು ಬಳಸಿಕೊಂಡು ನೀವು ಈ ವಾಸನೆಯನ್ನು ಹೋಗಲಾಡಿಸಬಹುದು. ಮೊದಲು ಟೀ ಎಲೆಗಳನ್ನು ಕುದಿಸಿಕೊಳ್ಳಿ. ನಂತ್ರ ಆ ನೀರಿನಲ್ಲಿ 30 ನಿಮಿಷಗಳ ಕಾಲ ನಿಮ್ಮ ಪಾದವನ್ನಿಡಿ. ಇದ್ರಿಂದ ಕಾಲಿನಲ್ಲಿರುವ ಬ್ಯಾಕ್ಟೀರಿಯಾ ಸಾಯುವ ಜೊತೆಗೆ ವಾಸನೆ ಮಾಯವಾಗುತ್ತದೆ.
ನೈಲಾನ್ ಹಾಗೆ ಬೇರೆ ಕಡಿಮೆ ಗುಣಮಟ್ಟದ ಸಾಕ್ಸ್ ಹಾಕುವುದರಿಂದ ಪಾದಗಳು ಜಾಸ್ತಿ ಬೆವರುತ್ತವೆ. ಹಾಗಾಗಿ ಉತ್ತಮ ಗುಣಮಟ್ಟದ ಸಾಕ್ಸ್ ಹಾಕಿ. ಹಾಗೆ ಸುಲಭವಾಗಿ ಗಾಳಿಯಾಡುವ ಶೂ ಹಾಕಿ.
ಒಂದು ಪಾತ್ರೆಯಲ್ಲಿ ಬಿಸಿ ನೀರಿಗೆ ಬೇಕಿಂಗ್ ಸೋಡಾ ಹಾಗೂ ನಿಂಬು ರಸವನ್ನು ಬೆರೆಸಿ ಪಾದಕ್ಕೆ ಹಾಕಿ. ಹೀಗೆ ಮಾಡುವುದರಿಂದ ಪಾದದಿಂದ ಬರುವ ವಾಸನೆ ಕಡಿಮೆಯಾಗುತ್ತದೆ.
ಒಂದು ಪಾತ್ರೆಗೆ ಬಿಸಿ ನೀರನ್ನು ಹಾಕಿ ನಾಲ್ಕು ಚಮಚ ಸ್ಪಟಿಕವನ್ನು ಹಾಕಿ. ನಂತ್ರ ಈ ನೀರಿನಲ್ಲಿ 30 ನಿಮಿಷ ಪಾದವನ್ನಿಡಿ. ಇದಲ್ಲದೆ ಆಗಾಗ ಸ್ಕ್ರಬ್ಬಿಂಗ್ ಮಾಡುವುದರಿಂದ ಕೂಡ ವಾಸನೆ ಕಡಿಮೆಯಾಗುತ್ತದೆ.