alex Certify ಹುಡುಗಿಯರ ಫೇವರೆಟ್ ಲಿಪ್ ಕ್ರೇಯಾನ್ಸ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಡುಗಿಯರ ಫೇವರೆಟ್ ಲಿಪ್ ಕ್ರೇಯಾನ್ಸ್….!

ತುಟಿಗಳಿಗೆ ಕಲರಿಂಗ್ ಮಾಡುವಂತಹ ಬಗೆ ಬಗೆಯ ಲಿಪ್ ಕ್ರೇಯಾನ್ಸ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಲಿಪ್ ಕ್ರೇಯಾನ್ಸ್ ಹುಡುಗಿಯರ ಹಾಟ್ ಫೇವರೆಟ್. ವರ್ಕಿಂಗ್ ವುಮೆನ್ ಗಳ ಬ್ಯೂಟಿ ಕಿಟ್ ನಲ್ಲಿ ಇವು ಸ್ಥಾನ ಪಡೆದುಕೊಂಡಿವೆ.

ನೋಡಲು ಥೇಟ್ ಪೆನ್ಸಿಲ್ ನಂತೆ ಕಾಣುವ ಇವುಗಳ ಬಳಕೆ ಕೂಡ ತುಂಬಾ ಸುಲಭ. ಅಲ್ಲದೆ ಕ್ಯಾರಿ ಮಾಡುವುದು ಸಹ ತುಂಬಾ ಈಸಿ. ಈ ಪಾಕೆಟ್ ಫ್ರೆಂಡ್ಲಿ ಲಿಪ್ ಕ್ರೇಯಾನ್ಸ್ ಗಳು ಯಾವ ಲಿಪ್ ಸ್ಟಿಕ್ ಗೂ ಕಮ್ಮಿ ಇಲ್ಲ. ಅಂದ ಹಾಗೆ ಇವುಗಳ ಬೆಲೆ ಕೂಡ ಕೈಗೆಟುಕುವಂತಿವೆ.

ಲಿಪ್ ಕ್ರೇಯಾನ್ಸ್ ಗಳು ಅನೇಕ ಶೇಡ್ ಗಳಲ್ಲಿ ಲಭ್ಯ. ಟ್ರೆಂಡ್ ಗೆ ತಕ್ಕಂತೆ ಹೊಸ ಹೊಸ ಶೇಡ್ ಗಳು ಬಿಡುಗಡೆಗೊಳ್ಳುತ್ತವೆ. ಹಾಗಾಗಿ ಸಾಕಷ್ಟು ಮಂದಿ ಈ ಲಿಪ್ ಕ್ರೇಯಾನ್ಸ್ ಗಳ ಮೊರೆ ಹೋಗುತ್ತಿದ್ದಾರೆ.

ಪೆನ್ಸಿಲ್ ನಂತೆ ಕಾಣುವ ಇವುಗಳನ್ನು ಶಾರ್ಪ್ ಮಾಡುವ ಟೆನ್ಶನ್ ಇಲ್ಲ. ರೋಲ್ ಮಾಡಿದ್ರೆ ಸಾಕು. ಮೆಂಟೇನೆನ್ಸ್ ಕೂಡ ಸಿಂಪಲ್. ಆದ್ರೆ ಯಾವುದೇ ಕಾರಣಕ್ಕೂ ಹೆಚ್ಚು ಮಂದಿ ಒಂದೇ ಲಿಪ್ ಕ್ರೇಯಾನ್ಸ್ ಬಳಸದಿದ್ದರೆ ಸಾಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...