ಚಳಿಗಾಲದಲ್ಲಿ ಮುಖದ ಜೊತೆ ಕಾಲು, ಪಾದ ಕೂಡ ಬಿರುಕು ಬಿಡುತ್ತದೆ. ಒಡೆದ ಹಿಮ್ಮಡಿ ಸೌಂದರ್ಯ ಕಳೆದುಕೊಳ್ಳುತ್ತದೆ.
ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಕ್ರೀಂ ಬಳಕೆ ಮಾಡಿದ್ರೂ ಪ್ರಯೋಜನ ಶೂನ್ಯ. ನೀವು ಮನೆಯಲ್ಲಿಯೇ ಇರುವ ವಸ್ತುಗಳನ್ನು ಬಳಸಿಕೊಂಡು ನಿಮ್ಮ ಪಾದದ ಬಿರುಕನ್ನು ಕಡಿಮೆ ಮಾಡಿಕೊಳ್ಳಬಹುದು. ಮೃದುವಾದ, ಸುಂದರ ಪಾದವನ್ನು ನಿಮ್ಮದಾಗಿಸಿಕೊಳ್ಳಬಹುದು.
ಮೃದು ಪಾದ ಪಡೆಯಲು ಈ ಮನೆ ಮದ್ದು ಉತ್ತಮ ಔಷಧಿ. ಇದಕ್ಕೆ ಬೇಕಾಗುವ ಸಾಮಗ್ರಿ : ¼ ಕಪ್ ಕುಂಬಳಕಾಯಿ ರಸ, 1/4 ಕಪ್ ಮೊಸರು ಹಾಗೂ ¼ ಚಮಚ ದಾಲ್ಚಿನಿ ಪುಡಿ.
ಕುಂಬಳಕಾಯಿ ರಸಕ್ಕೆ ದಾಲ್ಚಿನಿ ಪುಡಿಯನ್ನು ಮಿಶ್ರಣ ಮಾಡಿ. ಅದಕ್ಕೆ ಮೊಸರನ್ನು ಸೇರಿಸಿ ಪೇಸ್ಟ್ ಸಿದ್ಧಪಡಿಸಿಕೊಳ್ಳಿ. ಈ ಮಿಶ್ರಣವನ್ನು ಪಾದಕ್ಕೆ ಹಚ್ಚಿ. ಸ್ವಲ್ಪ ಸಮಯ ಬಿಟ್ಟು ನೀರಿನಲ್ಲಿ ತೊಳೆದುಕೊಳ್ಳಿ.