alex Certify ಪುರುಷರಿಗೂ ಇರಲಿ ತಮ್ಮ ಕೂದಲ ಬಗ್ಗೆ ಕಾಳಜಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುರುಷರಿಗೂ ಇರಲಿ ತಮ್ಮ ಕೂದಲ ಬಗ್ಗೆ ಕಾಳಜಿ

ಕೂದಲು ಉದುರುವ ಸಮಸ್ಯೆ ಪುರುಷರಲ್ಲಿ ಸಾಮಾನ್ಯವಾಗಿದೆ. ನಾನಾ ಕಾರಣಗಳಾದ ವಿಟಮಿನ್‌ ಕೊರತೆ, ನಿದ್ರಾಹೀನತೆಯಿಂದ ಕೂದಲು ಉದುರುವ ಸಮಸ್ಯೆ ಕಂಡು ಬರುತ್ತದೆ.

ಕೆಲವೊಮ್ಮೆ ಅರಿವಿಲ್ಲದೆ ಮಾಡುವ ತಪ್ಪಿನಿಂದಾಗಿ ಕೂದಲಿಗೆ ಹಾನಿಯಾಗಬಹುದು. ಈ ರೀತಿಯ ತಪ್ಪುಗಳನ್ನು ಮಾಡಿದರೆ ಕೂದಲು ಉದುರಿ ಹೋಗಬಹುದು.

ಬಿಸಿ ನೀರಿನ ಸ್ನಾನ

ಕೆಲವರಿಗೆ ತಣ್ಣೀರಿನಲ್ಲಿ ಸ್ನಾನ ಮಾಡಿ ಅಭ್ಯಾಸ ಇರುವುದಿಲ್ಲ. ಆದರೆ ತಲೆಗೆ ಬಿಸಿ ನೀರು ಒಳ್ಳೆಯದಲ್ಲ. ಅಂಥವರು ಬಿಸಿ ನೀರಿಗೆ ತಣ್ಣೀರು ಹಾಕಿ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಬೇಕು.

ನಿತ್ಯ ತಲೆ ಸ್ನಾನ

ವಾರದಲ್ಲಿ ಎರಡರಿಂದ ಮೂರು ಬಾರಿಯಷ್ಟೇ ತಲೆ ಸ್ನಾನ ಮಾಡುವುದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.

ಕಂಡೀಷನರ್‌ ಬಳಕೆ

ಕಂಡೀಷನರ್ ಅತಿಯಾಗಿ ಬಳಸುವುದರಿಂದ ಕೂದಲಿಗೆ ಹಾನಿಯಾಗುತ್ತದೆ.

ಶುದ್ಧವಿಲ್ಲದ ಬಾಚಣಿಕೆ

ಬೇರೆಯವರ ಬಾಚಣಿಕೆ ಬಳಸಬಾರದು. ಬಾಚಣಿಕೆಯನ್ನು ಆದಷ್ಟು ಶುದ್ಧವಾಗಿ ಇಟ್ಟುಕೊಳ್ಳಬೇಕು.

ಆಗಾಗ ಕೂದಲು ಮುಟ್ಟುವುದು

ಆಗಾಗ ಕೂದಲನ್ನು ಮುಟ್ಟುವುದು ಹುಡುಗರಿಗೆ ಒಂದು ಖಯಾಲಿ. ಇದರಿಂದ ಕೂದಲು ಜಿಡ್ಡಾಗುವುದು.

ಸೌಂದರ್ಯ ವರ್ಧಕಗಳು

ಕೂದಲಿನ ಸೌಂದರ್ಯ ವೃದ್ಧಿಸಲು ಸಾಕಷ್ಟು ಸೌಂದರ್ಯವರ್ಧಕಗಳು ದೊರೆಯುತ್ತವೆ. ಆದರೆ ಅವುಗಳಲ್ಲಿರುವ ಕೆಮಿಕಲ್ಸ್‌ ಕೂದಲಿಗೆ ಹಾನಿ ಉಂಟು ಮಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...