ಸುಂದರ ಮುಖದ ಜೊತೆ ಅಂದದ ಕೈ, ಕಾಲುಗಳು ಆಕರ್ಷಿಸುತ್ತವೆ. ಚಳಿಗಾಲದಲ್ಲಿ ಬಿರುಕು ಬಿಡುವ ಕೈ ಕಾಲುಗಳು ಸೌಂದರ್ಯ ಹಾಳು ಮಾಡುತ್ತವೆ. ಪ್ರತಿ ದಿನ ಬ್ಯೂಟಿಪಾರ್ಲರ್ ಗೆ ಹೋಗಿ ಕೈ-ಕಾಲಿನ ಚೆಂದ ಹೆಚ್ಚಿಸಿಕೊಳ್ಳಲು ಸಾಧ್ಯವಿಲ್ಲ. ಮನೆಯಲ್ಲಿಯೇ ಕೆಲವೊಂದು ಟಿಪ್ಸ್ ಬಳಸಿ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು.
ಕೈಗಳ ಸ್ವಚ್ಛತೆ ಮೆನಿಕ್ಯೂರ್ ಗೆ ಬೇಕಾಗುವ ವಸ್ತುಗಳು : ನೈಲ್ ಪೇಂಟ್ ರಿಮೋವರ್, ನೇಲ್ ಕಟ್ಟರ್, ಹತ್ತಿ, ಟಬ್ ಅಥವಾ ಬಕೆಟ್, ಶಾಂಪೂ, ಬೆಚ್ಚಗಿನ ನೀರು, 2 ಟೀಸ್ಪೂನ್ ಆಲಿವ್ ಎಣ್ಣೆ, 1 ಟೀಸ್ಪೂನ್ ಸಕ್ಕರೆ, ಟವೆಲ್.
ಮೆನಿಕ್ಯೂರ್ ಮಾಡೋದು ಹೇಗೆ? : ಮೊದಲು ಹತ್ತಿಯಿಂದ ಕೈ ಉಗುರುಗಳನ್ನು ಸ್ವಚ್ಛಗೊಳಿಸಿ ಮತ್ತು ಅವುಗಳನ್ನು ಉಜ್ಜಿ ಆಕಾರ ನೀಡಿ. ನಂತರ ಬೆಚ್ಚಗಿನ ನೀರಿಗೆ ಶ್ಯಾಂಪೂ ಹಾಕಿ ಕೈಗಳನ್ನು ಸ್ವಲ್ಪ ಸಮಯದವರೆಗೆ ಮುಳುಗಿಸಿ. ನಂತರ ನೀರಿನಿಂದ ಕೈಗಳನ್ನು ತೆಗೆದುಕೊಂಡು ಅದನ್ನು ಟವೆಲ್ ಗಳಿಂದ ಸ್ವಚ್ಛಗೊಳಿಸಿ. ಆಲಿವ್ ಎಣ್ಣೆ ಬಳಸಿ 10 ನಿಮಿಷಗಳವರೆಗೆ ಸ್ಕ್ರಬ್ ಮಾಡಿ. ಬೆಚ್ಚಗಿನ ನೀರಿನಿಂದ ಕೈಗಳನ್ನು ತೊಳೆಯಿರಿ. ಇದರಿಂದಾಗಿ ಕೈಗಳು ಸ್ವಚ್ಛವಾಗುವುದಲ್ಲದೆ ಹೆಚ್ಚು ಮೃದುವಾಗುತ್ತದೆ.
ಪೆಡಿಕ್ಯೂರ್ ಮಾಡಲು ಬೇಕಾಗುವ ವಸ್ತುಗಳು : ನೈಲ್ ಪೇಂಟ್ ರಿಮೋವರ್, ಹತ್ತಿ, ನೇಲ್ ಕಟ್ಟರ್, ನೈಲ್ ಫೈಲರ್, ಟವೆಲ್, ನೇಲ್ ಬ್ರಷ್, ಸ್ಕ್ರಬ್ ಮಾಡಲು ಬ್ರಷ್, ಜೇನುತುಪ್ಪ, ಕತ್ತರಿಸಿದ ನಿಂಬೆಹಣ್ಣು, ಹರ್ಬಲ್ ಶಾಂಪೂ, ಟಬ್ ಮತ್ತು ಬೆಚ್ಚಗಿನ ನೀರು.
ಪೆಡಿಕ್ಯೂರ್ ಹೀಗೆ ಮಾಡಿ : ಮೊದಲಿಗೆ ಪಾದಗಳ ಉಗುರುಗಳನ್ನು ಸ್ವಚ್ಛಗೊಳಿಸಿ. ನಂತರ ಟಬ್ ಗೆ ಮೃದುವಾದ ನೀರು ಹಾಕಿ ನಿಂಬೆ ಮತ್ತು ಗುಲಾಬಿ ಹೂ ಸೇರಿಸಿ. 10-15 ನಿಮಿಷಗಳ ಕಾಲ ನಿಮ್ಮ ಪಾದಗಳನ್ನು ಅದರಲ್ಲಿರಿಸಿ. ಸ್ವಲ್ಪ ಸಮಯದ ನಂತರ ಚರ್ಮ ಮೃದುವಾದ ಮೇಲೆ ಉಗುರುಗಳನ್ನು ಸ್ವಚ್ಛಗೊಳಿಸಿ. ಉಗುರಿನ ಮುಂಭಾಗವನ್ನು ಸ್ವಚ್ಛಗೊಳಿಸಲು ಮತ್ತು ಒಣಚರ್ಮವನ್ನು ತೆಗೆದುಹಾಕುವುದಕ್ಕೆ ಬ್ಯೂಟಿಕ್ ಕಲ್ಲು ಬಳಸಿ.
ನಿಮ್ಮ ಕಾಲುಗಳ ಮೇಲೆ ನಿಂಬೆ ಹಣ್ಣಿನ ಸ್ಲಯ್ಸ್ ಗಳನ್ನು ಇಡಿ. ಸ್ವಲ್ಪ ಸಮಯದ ನಂತರ ನಿಮ್ಮ ಪಾದಗಳನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಪಾದಕ್ಕೆ 2 ಟೀ ಚಮಚ ಜೇನುತುಪ್ಪವನ್ನು ಹಾಕಿ, ಸ್ಕ್ರಬ್ ಮಾಡಿದ ನಂತರ ಮತ್ತೊಮ್ಮೆ ಬೆಚ್ಚಗಿನ ನೀರಿನಿಂದ ಪಾದಗಳನ್ನು ಶುಚಿಗೊಳಿಸಿ. ನಂತರ ಟವೆಲ್ ನಿಂದ ಒರೆಸಿ.