ಬೇಸಿಗೆಯ ಬೇಗೆಗೆ ಹೇಗೆ ಮೇಕಪ್ ಮಾಡಿಕೊಂಡರೂ ಬೆವರಿನೊಂದಿಗೆ ವ್ಯರ್ಥವಾಗಿ ಹೋಗುತ್ತಿದೆ ಎಂಬ ಮಹಿಳೆಯರ ನೋವಿಗೆ ಕೆಲವು ಟಿಪ್ಸ್ ಗಳು ಇಲ್ಲಿವೆ ಕೇಳಿ.
ಕಚೇರಿಯಲ್ಲಿ ನಿಮ್ಮ ಲುಕ್ ಪರ್ಫೆಕ್ಟ್ ಆಗಿರಬೇಕು ಎಂದು ನೀವು ಬಯಸುತ್ತೀರೇ? ಹಾಗಿದ್ದರೆ ಕಚೇರಿಗೆ ಹೋಗುವ ಮುನ್ನ ನೀವು ಮೇಕಪ್ ಅರಂಭಿಸುವಾಗ ಮೊದಲು ಐಸ್ ಪೀಸ್ ನಿಂದ ನಿಮ್ಮ ಮುಖವನ್ನು ಕನಿಷ್ಠ 5 ನಿಮಿಷ ಕಾಲ ಮಸಾಜ್ ಮಾಡಿ. ಬಳಿಕ ಮೇಕಪ್ ಹಾಕಿಕೊಳ್ಳಿ.
ಮೊದಲು ಮುಖಕ್ಕೆ ಪ್ರೈಮರ್ ಬಳಸಿ. ಇದು ದಿನವಿಡೀ ನಿಮ್ಮ ಮುಖವನ್ನು ಫ್ರೆಶ್ ಆಗಿಸುತ್ತದೆ. ಬಳಿಕ ಮಾಯಿಸ್ಚರೈಸರ್ ಹಚ್ಚಿ. ಇದನ್ನು ನಿಮ್ಮ ತ್ವಚೆ ಹೀರಿಕೊಳ್ಳಲಿ.
ಮೀಟಿಂಗ್ ಗೆ ಹೋಗುವ ಮುನ್ನ ಕಣ್ಣುಗಳ ಬಳಿ ಕಪ್ಪು ವರ್ತುಲಗಳನ್ನು ದೂರ ಮಾಡಲು ಫೌಂಡೇಶನ್ ಬಳಸಿ. ಬಳಿಕ ಮಸ್ಕರಾ ಹಚ್ಚಿಕೊಳ್ಳಿ.
ಕಾಂಪಾಕ್ಟ್ ಪೌಡರ್ ಅನ್ನು ಇಡೀ ಮುಖಕ್ಕೆ ಹಚ್ಚಿ. ಬಳಿಕ ತಿಳಿ ಬಣ್ಣದ ಬ್ಲಶ್ ಬಳಸಿ. ಗಲ್ಲದ ತನಕ ಇದನ್ನು ಬ್ಲಶ್ ಮಾಡಲು ಮರೆಯದಿರಿ.