ಕೂದಲಿಗೆ ಕಲರಿಂಗ್ ಮಾಡೋದು ಸದ್ಯ ತುಂಬಾ ಜನಪ್ರಿಯವಾಗಿರೋ ಟ್ರೆಂಡ್. ಹೊಸ ಲುಕ್ ಬೇಕು ಅಂತಾ ಎಲ್ರೂ ಹೇರ್ ಕಲರಿಂಗ್ ಮಾಡಿಸಿಕೊಳ್ತಾರೆ. ಇದೇ ಮೊದಲ ಬಾರಿ ನೀವು ಕೂದಲಿಗೆ ಬಣ್ಣ ಹಚ್ಚಿಕೊಳ್ತಿದ್ರೆ ಕೆಲವೊಂದು ವಿಷಯಗಳನ್ನು ತಿಳಿದುಕೊಂಡಿರಲೇಬೇಕು.
ಬಣ್ಣ ನಿಮ್ಮ ಕೂದಲಿಗೆ ಎಷ್ಟು ಸುರಕ್ಷಿತ :
ಹೇರ್ ಕಲರಿಂಗ್ ಒಂದು ಕೆಮಿಕಲ್ ಚಿಕಿತ್ಸೆ. ರಾಸಾಯನಿಕಗಳನ್ನು ಬಳಸಿ ನಿಮ್ಮ ಕೂದಲಿನ ಬಣ್ಣ ಬದಲಾಯಿಸಲಾಗುತ್ತದೆ. ಇದರಿಂದ ನಿಮ್ಮ ಕೂದಲಿನ ಗುಣಮಟ್ಟ ಮೊದಲಿನಂತಿರುವುದಿಲ್ಲ. ಅತಿಯಾದ ಹೊಟ್ಟು ಅಥವಾ ಕೂದಲು ಉದುರುವ ಸಮಸ್ಯೆ ಇದ್ದಲ್ಲಿ ನಿಮ್ಮ ಕೂದಲಿಗೆ ಇನ್ನಷ್ಟು ಹಾನಿಯಾಗುವ ಸಾಧ್ಯತೆ ಇರುತ್ತದೆ.
ಮನೆಯಲ್ಲೇ ಹೇರ್ ಕಲರಿಂಗ್ ಮಾಡೋದು ಹೇಗೆ :
ಒಬ್ಬರನ್ನು ಸಹಾಯಕ್ಕೆ ಕರೆದುಕೊಳ್ಳಿ, ಮನೆಯಲ್ಲೇ ನೀವು ಕೂದಲಿಗೆ ಬಣ್ಣ ಹಚ್ಚಿಕೊಳ್ಳಬಹುದು. ಮೊದಲು ಕಲರ್ ನಿಂದ ನಿಮಗೇನಾದ್ರೂ ಅಲರ್ಜಿ ಇದೆಯಾ ಅನ್ನೋದನ್ನು ಪರೀಕ್ಷಿಸಿಕೊಳ್ಳಿ. ನಿಮ್ಮ ಚರ್ಮದ ಬಣ್ಣಕ್ಕೆ ಹೊಂದಿಕೆಯಾಗುವ ಕಲರ್ ಆಯ್ದುಕೊಳ್ಳಿ.
ಬಣ್ಣ ಹಚ್ಚಿದ ಮೇಲೆ ಅಲ್ಲಿ ಸೂಚಿಸಿದಷ್ಟು ಕಾಲ ಮಾತ್ರ ಅದನ್ನಿಟ್ಟುಕೊಂಡು ನಂತರ ತೊಳೆಯಿರಿ. ಇಲ್ಲವಾದಲ್ಲಿ ಕೂದಲು ಒರಟಾಗಬಹುದು, ಅಥವಾ ಬಣ್ಣ ಬದಲಾಗಬಹುದು. ಕಲರಿಂಗ್ ಮಾಡಿದ ನಂತರ ಕಂಡೀಷನರ್ ಹಾಕೋದನ್ನು ಮರೆಯಬೇಡಿ.
ಇದರಿಂದ ಬಣ್ಣ ತುಂಬಾ ದಿನ ಇರುತ್ತದೆ, ಜೊತೆಗೆ ನಿಮ್ಮ ಕೂದಲ ಹೊಳಪು ಕೂಡ ಕುಂದುವುದಿಲ್ಲ. ಕಲರ್ ಸೇಫ್ ಶಾಂಪೂ ಮತ್ತು ಕಂಡಿಷನರ್ ಗಳನ್ನು ಬಳಸಬಹುದು. ಇದಕ್ಕಾಗಿ ಸ್ಟೈಲಿಸ್ಟ್ ಗಳ ಸಲಹೆಯನ್ನೂ ಪಡೆಯಬಹುದು. ಮೊದಲ ಬಾರಿ ರೂಟ್ಸ್ ಮಾತ್ರ ಕಲರ್ ಮಾಡಿ.