ಕನ್ನಡಕ ಹಾಕಿಕೊಳ್ಳುವ ಕೆಲವರ ಮೂಗಿನ ಮೇಲೆ ಕಲೆಯಾಗೋದು ಸಾಮಾನ್ಯ. ಇದ್ರಿಂದ ಮುಖದ ಸೌಂದರ್ಯ ಹಾಳಾಗುತ್ತದೆ. ಕಪ್ಪು ಕಲೆಯಿಂದ ಬಳಲುತ್ತಿರುವವರು ಬ್ಯೂಟಿ ಪಾರ್ಲರ್ ಸುತ್ತಿ ಹಣ ಖರ್ಚು ಮಾಡಬೇಕಾಗಿಲ್ಲ. ಸರಳ, ಸುಲಭ ಉಪಾಯದಿಂದ ಈ ಕಲೆಗೆ ಗುಡ್ ಬೈ ಹೇಳಬಹುದು.
ಕಿತ್ತಳೆ : ಕಿತ್ತಳೆ ಸಿಪ್ಪೆಯನ್ನು ಸೂರ್ಯನ ಬೆಳಕಿನಲ್ಲಿ ಒಣಗಿಸಿ ಅದನ್ನು ಪುಡಿ ಮಾಡಿ. ಒಂದು ಚಮಚ ಕಿತ್ತಳೆ ಸಿಪ್ಪೆ ಪುಡಿಗೆ ಅರ್ಧ ಚಮಚ ಹಾಲನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಮೂಗಿನ ಕಲೆ ಮೇಲೆ ಹಚ್ಚಿ. ಒಣಗಿದ ನಂತ್ರ ತಣ್ಣನೆಯ ನೀರಿನಲ್ಲಿ ಮೂಗನ್ನು ತೊಳೆಯಿರಿ. ನಾಲ್ಕೈದು ದಿನ ಈ ಮಿಶ್ರಣವನ್ನು ಹಚ್ಚಿಕೊಳ್ಳುತ್ತ ಬಂದಲ್ಲಿ ಫಲಿತಾಂಶ ಕಾಣಬಹುದಾಗಿದೆ.
ನಿಂಬು : ಒಂದು ಚಮಚ ನಿಂಬೆ ರಸವನ್ನು ಒಂದು ಚಮಚ ನೀರಿಗೆ ಬೆರೆಸಿ ಹತ್ತಿ ಸಹಾಯದಿಂದ ಮೂಗಿನ ಕಲೆ ಮೇಲೆ ಹಚ್ಚಿ. 15 ನಿಮಿಷ ಬಿಟ್ಟು ತಣ್ಣನೆಯ ನೀರಿನಲ್ಲಿ ಮೂಗನ್ನು ತೊಳೆಯಿರಿ. ಒಂದು ವಾರ ಇದನ್ನು ಹಚ್ಚಿದ್ರೆ ಕಲೆ ಮಾಯ.
ಸೌತೆಕಾಯಿ : ಮುಖದ ಮೇಲಿನ ಕಲೆಗಳನ್ನು ಹೋಗಲಾಡಿಸುವ ಶಕ್ತಿ ಸೌತೆಕಾಯಿಗಿದೆ. ಸೌತೆ ಕಾಯಿಯನ್ನು ಕತ್ತರಿಸಿ ಹೋಳುಗಳನ್ನು ಕಲೆಯಾಗಿರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿದ್ರೆ ಕೆಲವೇ ದಿನಗಳಲ್ಲಿ ಕಲೆ ಕಡಿಮೆಯಾಗುತ್ತದೆ.