ಋತುಗಳು ಬದಲಾದಂತೆ ಆರೋಗ್ಯದ ಸಮಸ್ಯೆಗಳ ಜೊತೆಗೆ ಚರ್ಮ, ಕೂದಲಿನ ಸಮಸ್ಯೆಯು ಕಾಡುತ್ತದೆ. ಇಂತಹ ಸಮಸ್ಯೆಗಳನ್ನು ನಿವಾರಿಸಲು ಮನೆಯಲ್ಲಿಯೇ ನೈಸರ್ಗಿಕವಾದ ಹೇರ್ ಜೆಲ್ ತಯಾರಿಸಿ ಬಳಸಿ. ಇದರಿಂದ ಕೂದಲಿನ ಸಮಸ್ಯೆಗಳು ನಿವಾರಣೆಯಾಗುತ್ತದೆ.
*ಅಗಸೆಬೀಜಗಳು ಕೂದಲನ್ನು ಮೃದುವಾಗಿ, ಹೊಳೆಯುವಂತೆ ಮಾಡುತ್ತದೆ. 1 ಕಪ್ ಅಗಸೆ ಬೀಜಗಳನ್ನು ರಾತ್ರಿಯಿಡಿ ನೆನೆಸಿಟ್ಟು ಬೆಳಿಗ್ಗೆ ನೀರಿನಲ್ಲಿ ಕುದಿಸಿ. ಇದನ್ನು 30 ನಿಮಿಷಗಳ ಕಾಲ ಕುದಿಸಿದ ಬಳಿಕ ಮೇಲ್ಭಾಗದಲ್ಲಿ ಜೆಲ್ ಉತ್ಪತ್ತಿಯಾಗುತ್ತದೆ. ಅದನ್ನು ಸೋಸಿ ಒದ್ದೆಯಾದ ಕೂದಲಿಗೆ ಹಚ್ಚಿ. ಒಣಗಿದ ಬಳಿಕ ವಾಶ್ ಮಾಡಿ.
*ಅಲೋವೆರಾ ಕೂದಲನ್ನು ನೈಸರ್ಗಿಕವಾಗಿ ಹೈಡ್ರೇಟ್ ಮಾಡುತ್ತದೆ. ಇದು ನೆತ್ತಿಯ ಸೋಂಕುಗಳನ್ನು ಗುಣಪಡಿಸುತ್ತದೆ. ಅಲೋವೆರಾ ಎಲೆಗಳಿಂದ ಜೆಲ್ ನ್ನು ಮತ್ತು ನಿಂಬೆ ತೆಗೆದುಕೊಂಡು ಒಂದು ಕಪ್ ನೀರಿಗೆ ಹಾಕಿ, 10 ನಿಮಿಷ ಕುದಿಸಿ. ಈ ಮಿಶ್ರಣ ದಪ್ಪವಾಗುತ್ತದೆ. ಇದನ್ನು ತಣ್ಣಗಾಗಲು ಬಿಡಿ . ಇದನ್ನು ಕೂದಲಿಗೆ ಹಚ್ಚಿ ವಾಶ್ ಮಾಡಿ.