ಸುಡುವ ಬೇಸಿಗೆಯಲ್ಲಿ ಚರ್ಮದ ಜೊತೆಗೆ ಕೂದಲಿನ ಆರೈಕೆಯು ಬಹಳ ಮುಖ್ಯ. ಬೆವರು, ಧೂಳಿನಿಂದ ಕೂದಲಿನ ಅಂದ ಕೆಡುತ್ತದೆ.
ಅಲ್ಲದೇ ಕೂದಲು ಉದುರುವ ಪ್ರಮಾಣ ಹೆಚ್ಚಾಗುತ್ತದೆ. ಹಾಗಾಗಿ ಮನೆಯಲ್ಲೇ ಸಿಗುವ ವಸ್ತುಗಳಿಂದ ಕೂದಲಿನ ಆರೈಕೆ ಹೇಗೆ ಮಾಡಿಕೊಳ್ಳಬಹುದು ಅನ್ನೋ ಮಾಹಿತಿ ಇಲ್ಲಿದೆ.
ಸಾಸಿವೆ ಎಣ್ಣೆ
ಶಾಂಪೂ, ಕಂಡೀಷನರ್ ಬಳಸುವ ಅರ್ಧ ಗಂಟೆ ಮೊದಲು ಸಾಸಿವೆ ಎಣ್ಣೆಯನ್ನು ಹಾಕಿ ಕೂದಲನ್ನು ಮಸಾಜ್ ಮಾಡಿಕೊಳ್ಳಿ. ಇದರಿಂದ ಕೂದಲು ಶುಷ್ಕವಾಗದೆ ಹೊಳಪು ಪಡೆಯುತ್ತದೆ.
ಮೆಹಂದಿ
ಎಣ್ಣೆಯುಕ್ತ ಕೂದಲು ಹೊಂದಿದವರಿಗೆ ಮೆಹಂದಿ ಬೆಸ್ಟ್. ಮೆಹಂದಿ ಪುಡಿಗೆ ಒಂದು ಚಮಚ ಮೊಸರು, ನೀರು ಸೇರಿಸಿ ಪೇಸ್ಟ್ ಮಾಡಿ ಅದನ್ನು ಕೂದಲಿಗೆ ಹಚ್ಚಿಕೊಳ್ಳಿ. 15 ನಿಮಿಷದ ನಂತರ ಕೂದಲನ್ನು ಸ್ವಚ್ಛವಾಗಿ ತೊಳೆಯಿರಿ. ಇದರಿಂದ ಕೂದಲಿಗೆ ಪ್ರಾಕೃತಿಕ ಬಣ್ಣ ಬರುವ ಜೊತೆಗೆ ಜಿಡ್ಡಿನ ಸಮಸ್ಯೆ ಕಡಿಮೆಯಾಗುತ್ತದೆ.