ಬಿಸಿಲು, ಧಗೆ, ಸೆಕೆ. ಈಗ ಎಲ್ಲರ ಬಾಯಿಯಲ್ಲೂ ಇದೇ ಮಾತು. ಬೇಸಿಗೆಯಲ್ಲಿ ಮನೆಯಿಂದ ಹೊರ ಬೀಳೋದೇ ಕಷ್ಟ. ಬಿಸಿಲ ಧಗೆ ಚರ್ಮದ ಕಾಂತಿಯನ್ನು ಹಾಳು ಮಾಡುತ್ತದೆ. ಮುಖವನ್ನು ಎಷ್ಟು ಮುಚ್ಚಿಕೊಂಡು, ಛತ್ರಿ ಹಿಡಿದು ನಡೆದ್ರೂ ಮುಖದ ಮೇಲೆ ಟ್ಯಾನಿಂಗ್ ಕಾಣಿಸಿಕೊಳ್ಳುತ್ತದೆ. ಆಗಾಗ ಮುಖ ತೊಳೆಯುವ ಜನರು ಕೂಲ್ ಗಾಗಿ ಬ್ಯೂಟಿ ಪಾರ್ಲರ್ ಮೊರೆ ಹೋಗ್ತಾರೆ.
ಈ ಬೇಸಿಗೆಯಲ್ಲೂ ಟ್ಯಾನಿಂಗ್ ನಿಂದ ತಪ್ಪಿಸಿಕೊಂಡು ಹೊಳೆಯುವ ಮುಖ ನಿಮ್ಮದಾಗಿಸಿಕೊಳ್ಳಲು ಬ್ಯೂಟಿ ಪಾರ್ಲರ್ ಗೆ ಹೋಗಬೇಕಾಗಿಲ್ಲ. ಯಾವುದೇ ಕ್ರೀಂ ಬಳಸುವ ಅವಶ್ಯಕತೆಯೂ ಇಲ್ಲ. ಅಡುಗೆ ಮನೆಯಲ್ಲಿರುವ ವಸ್ತುಗಳೇ ನಿಮ್ಮ ಸೌಂದರ್ಯ ರಕ್ಷಿಸುವ ಕೆಲಸ ಮಾಡುತ್ತವೆ.
ಸೌತೆಕಾಯಿ-ಮೊಸರು : ಸೌತೆಕಾಯಿ ಹಾಗೂ ಮೊಸರನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟನ್ನು ಮುಖಕ್ಕೆ ಹಚ್ಚಿ, ಕೈನಲ್ಲಿ ಮೃದುವಾಗಿ ಮಸಾಜ್ ಮಾಡಿ. ಸ್ವಲ್ಪ ಸಮಯದ ನಂತ್ರ ಮುಖ ತೊಳೆಯಿರಿ. ಒಣ ಚರ್ಮದವರಿಗೆ ಇದು ಬಹಳ ಪ್ರಯೋಜನಕಾರಿ.
ಸೌತೆಕಾಯಿಯಿಂದ ʼಸೌಂದರ್ಯʼ ವೃದ್ಧಿ
ಸೌತೆಕಾಯಿ-ಅಲೋವೇರಾ : ಸೌತೆಕಾಯಿ ಹಾಗೂ ಅಲೋವೇರಾ ಎರಡೂ ಚರ್ಮಕ್ಕೆ ಬಹಳ ಒಳ್ಳೆಯದು. ಈ ಎರಡೂ ಪದಾರ್ಥ ಎಲ್ಲರ ಮನೆಯಲ್ಲಿಯೂ ಸಿಗುತ್ತದೆ. ಮೊದಲು ಸೌತೆಕಾಯಿ ಪೇಸ್ಟ್ ತಯಾರಿಸಿಕೊಳ್ಳಿ. ಅದಕ್ಕೆ ಒಂದು ಚಮಚ ಅಲೋವೇರಾ ಜೆಲ್ ಮಿಕ್ಸ್ ಮಾಡಿ. ನಂತ್ರ ನಿಂಬೆ ರಸವನ್ನು ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತ್ರ ಮುಖ ತೊಳೆಯಿರಿ.
ಸೌತೆಕಾಯಿ-ಓಟ್ಸ್ : ಬೇಸಿಗೆಯಲ್ಲಿ ಡೆಡ್ ಸ್ಕಿನ್ ಸಮಸ್ಯೆ ಕಾಡುತ್ತದೆ. ಈ ಡೆಡ್ ಸ್ಕಿನ್ ಹೋಗಲಾಡಿಸಲು ನೀವು ಸೌತೆಕಾಯಿ ಹಾಗೂ ಓಟ್ಸ್ ಪೇಸ್ಟ್ ಬಳಸಬಹುದು. ಓಟ್ಸ್, ಸೌತೆಕಾಯಿ ಹಾಗೂ ಅರಿಶಿನದ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ.
ಸೌತೆಕಾಯಿ-ಕಿತ್ತಳೆ : ಸೌತೆಕಾಯಿ ಹಾಗೂ ಕಿತ್ತಳೆ ಹಣ್ಣಿನ ರಸವನ್ನು ಮಿಕ್ಸ್ ಮಾಡಿ ದಪ್ಪ ಪೇಸ್ಟ್ ಮಾಡಿಕೊಳ್ಳಿ. ನಂತ್ರ ಮುಖಕ್ಕೆ ಹಚ್ಚಿ ಒಣಗಿದ ನಂತ್ರ ತೊಳೆಯಿರಿ.