ಸೌಂದರ್ಯ ವೃದ್ಧಿಗೆ ಬೆಲೆಬಾಳುವ ಕ್ರೀಮ್, ಪೌಡರ್ ಬೇಕಾಗಿಲ್ಲ. ಸರಳವಾದ ಮನೆಮದ್ದು ಬಳಸಿ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು. ಕೆಲ ಸಿಂಪಲ್ ಟಿಪ್ಸ್ ಗಳನ್ನು ಪಾಲಿಸಿದರೆ ಸಹಜವಾಗಿ ಬದಲಾವಣೆಯನ್ನು ಕಾಣಬಹುದು.
ಹೊಳೆಯುವ ತ್ವಚೆಗಾಗಿ
ಸಿಟ್ರಿಕ್ ಹಣ್ಣುಗಳ ಸಿಪ್ಪೆ (ಕಿತ್ತಳೆ, ನಿಂಬೆಹಣ್ಣು) ಒಣಗಿಸಿ ಪುಡಿ ಮಾಡಿ ಫೇಸ್ ಮಾಸ್ಕ್ ರೀತಿ ಬಳಸಿದರೆ ಮುಖದ ಕಾಂತಿ ಹೆಚ್ಚುತ್ತದೆ.
ಆಕರ್ಷಕ ಕಣ್ರೆಪ್ಪೆ, ಹುಬ್ಬಿಗಾಗಿ
ಹರಳೆಣ್ಣೆ, ವಿಟಮಿನ್ ಇ, ಲೋಳೆಸರ ಮಿಕ್ಸ್ ಮಾಡಿ ಕಣ್ರೆಪ್ಪೆ ಹಾಗೂ ಹುಬ್ಬಿಗೆ ಹಚ್ಚುವುದರಿಂದ ಕಪ್ಪಾದ ಕಣ್ರೆಪ್ಪೆ ಹಾಗೂ ಹುಬ್ಬು ಪಡೆಯಬಹುದು.
ಮೃದುವಾದ ತ್ವಚೆಗಾಗಿ
ವಿಟಮಿನ್ ಇ ಹಾಗೂ ತೆಂಗಿನೆಣ್ಣೆ ಮಿಕ್ಸ್ ಮಾಡಿ ಸ್ನಾನಕ್ಕೆ ಅರ್ಧ ಗಂಟೆ ಮೊದಲು ಮೈಗೆ ಉಜ್ಜಿದರೆ ತ್ವಚೆ ಮೃದುವಾಗುವುದು.
ಮುಖದ ಚೆಲುವು ಹೆಚ್ಚಿಸಲು
ಎಳನೀರನ್ನು ದಿನಾ ಮುಖಕ್ಕೆ ಹಾಕಿದರೆ ಮುಖದ ಕಾಂತಿ ಹೆಚ್ಚುವುದು.
ತುಟಿಯ ಆರೈಕೆಗೆ
ದಿನಾ ತುಟಿಗೆ ಸ್ವಲ್ಪ ಜೇನುತುಪ್ಪ ಹಚ್ಚಿದರೆ ತುಟಿಯ ಹೊಳಪು ಹೆಚ್ಚುವುದು.
ಕೂದಲಿನ ಹೊಳಪಿಗೆ
ಒಂದು ಬಕೆಟ್ ನೀರಿಗೆ 2 ಚಮಚ ವಿನೆಗರ್ ಹಾಕಿ ಆ ನೀರಿನಿಂದ ತಲೆ ಸ್ನಾನ ಮಾಡಿದರೆ ಕೂದಲು ಕಾಂತಿಯುತವಾಗಿ ಕಾಣುತ್ತದೆ.