ತಲೆ ಹೊಟ್ಟು ಎಲ್ಲರನ್ನು ಕಾಡುವ ಸಾಮಾನ್ಯ ಸಮಸ್ಯೆ. ತಲೆಹೊಟ್ಟು ಕಾಡಲು ಅನೇಕ ಕಾರಣಗಳಿವೆ. ತಲೆ ಹೊಟ್ಟಿನಿಂದ ವಿಪರೀತ ತುರಿಕೆ, ಉರಿ, ಕೂದಲು ಉದುರುವ ಸಮಸ್ಯೆ ಕಾಡಲು ಶುರುವಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳು ಸಂಪೂರ್ಣ ತಲೆಹೊಟ್ಟಿಗೆ ಪರಿಹಾರ ನೀಡುವುದಿಲ್ಲ. ಹಾಗಾಗಿ ಕೆಲವೊಂದು ಮುಂಜಾಗ್ರತಾ ಕ್ರಮಗಳು ತಲೆಹೊಟ್ಟು ಕಡಿಮೆ ಮಾಡಲು ನೆರವಾಗುತ್ತವೆ.
ನಿಯಮಿತವಾಗಿ ನಿಮ್ಮ ಕೂದಲನ್ನು ಬಾಚಿಕೊಳ್ಳುತ್ತಿದ್ದರೆ ತಲೆ ಹೊಟ್ಟಿನ ಸಮಸ್ಯೆಯನ್ನು ನಿಯಂತ್ರಣದಲ್ಲಿಡಬಹುದು. ಇದು ಕೂದಲಿನ ಬೇರುಗಳಿಗೆ ಎಣ್ಣೆ ಅಂಶ ಸರಿಯಾಗಿ ದೊರಕಲು ನೆರವಾಗುತ್ತದೆ. ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.
ಉತ್ತಮ ಗುಣಮಟ್ಟದ ಶಾಂಪೂ ಬಳಸಬೇಕು. ಜಿಂಕ್ ಪೈರೀಥಿಯನ್ ಹೊಂದಿರುವ ಉತ್ಪನ್ನಗಳನ್ನು ಬಳಸಿ. ಇದು ತಲೆಹೊಟ್ಟು ನಿವಾರಿಸುವುದಕ್ಕೆ ಹೆಚ್ಚು ಪರಿಣಾಮಕಾರಿಯಾಗಿದೆ.
ನಾಭಿಗೆ ಈ ಎಣ್ಣೆ ಹಾಕಿದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ…?
ಅಲೋವೆರಾ ರಸದಿಂದ ಕೂದಲಿನ ಮಸಾಜ್ ಮಾಡಿ. ಒಂದು ಗಂಟೆಯ ನಂತರ ತಣ್ಣೀರಿನಲ್ಲಿ ತೊಳೆಯಿರಿ.
ತೆಂಗಿನ ಎಣ್ಣೆಯನ್ನು ಕರ್ಪೂರದೊಂದಿಗೆ ಮಿಕ್ಸ್ ಮಾಡಿ, ಸ್ನಾನಕ್ಕೆ ಅರ್ಧ ಗಂಟೆ ಮೊದಲು ಕೂದಲಿಗೆ ಅಪ್ಲೈ ಮಾಡಿ. ನಿಯಮಿತವಾಗಿ ಹೀಗೆ ಮಾಡಿದ್ರೆ ತಲೆಹೊಟ್ಟಿಗೆ ಪರಿಹಾರ ಕಾಣಬಹುದು.
ಒಂದು ಗ್ಲಾಸ್ ನೀರಿಗೆ 4 ಚಮಚ ಕಡಲೆ ಹಿಟ್ಟಿನ ಮಿಶ್ರಣ ಹಾಕಿ ಅದನ್ನು ಕೂದಲಿನ ಬುಡಕ್ಕೆ ಸರಿಯಾಗಿ ಹಚ್ಚಿ. ಒಂದು ಗಂಟೆ ಬಿಟ್ಟು ನಂತರ ಕೂದಲನ್ನು ತೊಳೆಯಿರಿ. ಇದು ಕೂಡ ತಲೆಹೊಟ್ಟು ನಿವಾರಣೆಗೆ ಸಹಕಾರಿ.