ಸುಂದರವಾದ ಹೊಳೆಯುವ ಚರ್ಮ ಸದಾ ಹೀಗೇ ಇರಬೇಕು ಅನ್ನೋ ಆಸೆ ಯಾರಿಗಿರಲ್ಲ ಹೇಳಿ. ಆದ್ರೆ ವಯಸ್ಸಾಗ್ತಿದ್ದಂತೆ ಚರ್ಮ ಕೂಡ ಸುಕ್ಕುಗಟ್ಟುತ್ತೆ. ಆದ್ರೆ ಮುಪ್ಪು ಆವರಿಸುವ ಮುನ್ನವೇ ಚರ್ಮ ಸುಕ್ಕುಗಟ್ಟಿದ್ರೆ ಬೇಸರವಾಗೋದು ಸಹಜ.
ನಮಗಿಂತ ನಮ್ಮ ಚರ್ಮಕ್ಕೆ ಹೆಚ್ಚು ವಯಸ್ಸಾಗಿದ್ಯಾ ಅನ್ನೋದನ್ನು ಕೂಡ ನೀವು ತಿಳಿದುಕೊಳ್ಳಬಹುದು, ಅದು ಕೂಡ ಕೇವಲ 10 ಸೆಕೆಂಡ್ ಗಳಲ್ಲಿ. ಎಲ್ಲಾದ್ರೂ ಒಂದ್ಕಡೆ ನಿಮ್ಮ ಚರ್ಮಕ್ಕೆ ನೀವು ಜಿಗುಟಿಕೊಳ್ಳಿ, ಅದು ಮರಳಿ ಸ್ವಸ್ಥಾನಕ್ಕೆ ಸೇರುವ ಸಮಯವೇ ನಿಮ್ಮ ಚರ್ಮದ ವಯಸ್ಸನ್ನು ನಿರ್ಧರಿಸುತ್ತೆ.
ನೀರು ಕುಡಿಯಿರಿ, ಉರಿ ಮೂತ್ರದಿಂದ ದೂರವಿರಿ
ಜಿಗುಟಿದಾಗ ಮಡಚಿಕೊಂಡ ಚರ್ಮ ಬೇಗನೆ ಮೊದಲಿನಂತಾದ್ರೆ ಅದು ನಿಮಗಿಂತ ಯಂಗ್ ಆಗಿದೆ ಎಂದರ್ಥ. ತಡವಾದಲ್ಲಿ ನಿಮಗಿಂತ ನಿಮ್ಮ ಚರ್ಮಕ್ಕೇ ಹೆಚ್ಚು ವಯಸ್ಸಾಗಿದೆ ಅನ್ನೋದು ಗ್ಯಾರಂಟಿ. 2 ಸೆಕೆಂಡ್ ಗಳೊಳಗೆ ಅದು ಸ್ವಸ್ಥಾನಕ್ಕೆ ಬಂದ್ರೆ ನಿಮ್ಮ ಚರ್ಮದ ವಯಸ್ಸು 30 ರ ಆಸುಪಾಸು, 3-4 ಸೆಕೆಂಡ್ ಗಳಾದ್ರೆ ಚರ್ಮದ ವಯಸ್ಸು 30-44, 5-9 ಸೆಕೆಂಡ್ ಗಳಾದ್ರೆ ಚರ್ಮದ ವಯಸ್ಸು 45-50, ಅಂದಾಜು 10 ಸೆಕೆಂಡ್ ಗಳಿಗಿಂತ ಹೆಚ್ಚಾದ್ರೆ ಚರ್ಮದ ವಯಸ್ಸು 60 ಎಂದರ್ಥ. ಚರ್ಮಕ್ಕೆ ವಯಸ್ಸಾಗ್ತಿದೆ ಅಂತಾ ಗಾಬರಿಪಡಬೇಡಿ, ಒಳ್ಳೆ ಆಹಾರ ತಿನ್ನಿ, ಹೊಟ್ಟೆ ತುಂಬಾ ನೀರು ಕುಡಿಯಿರಿ ಸುಂದರ ಚರ್ಮ ನಿಮ್ಮದಾಗುತ್ತದೆ.