ಇದ್ದಿಲು ಅನೇಕ ಔಷಧೀಯ ಗುಣಗಳಿಂದ ಕೂಡಿದೆ. ಇದ್ದಿಲಿನ ಅಂತಹ ಕೆಲವು ಔಷಧೀಯ ಗುಣಗಳು ಹೀಗಿವೆ.
ಇದ್ದಿಲಿನಿಂದ ಹಲ್ಲುಗಳನ್ನು ತಿಕ್ಕಿದಲ್ಲಿ ಹಲ್ಲು ಹೊಳಪನ್ನು ಪಡೆಯುತ್ತದೆ. ಹೀಗೆ ಹಲ್ಲುಗಳನ್ನು ತಿಕ್ಕುವ ಇದ್ದಿಲು ತೆಂಗಿನ ಮರದ ಕಟ್ಟಿಗೆಯದ್ದಾಗಿರಬೇಕು.
ಮಾರುಕಟ್ಟೆಯಲ್ಲಿ ಸಿಗುವ ಪೌಡರ್ ಇದ್ದಿಲನ್ನು ಬ್ರೆಶ್ ಗೆ ಹಾಕಿ ಕೂಡ ಹಲ್ಲನ್ನು ತಿಕ್ಕಬಹುದು. ಇದರಿಂದ ಹಳದಿಯಾದ ಹಲ್ಲು ಹೊಳಪನ್ನು ಪಡೆಯುತ್ತದೆ.
ಮುಖದ ಮೇಲಿನ ಮೊಡವೆಗಳಿಗೂ ಇದ್ದಿಲು ರಾಮಬಾಣ. ಇದ್ದಿಲು ಮತ್ತು ಅಲೋವೆರಾ ಮಿಶ್ರಣವನ್ನು ಮೊಡವೆಗೆ ಲೇಪಿಸಿದರೆ ಮೊಡವೆ ಮಾಯವಾಗುತ್ತದೆ.
ದೇಹದ ಯಾವುದಾದರೂ ಭಾಗಕ್ಕೆ ಕೀಟಗಳು ಕಡಿದರೆ, ಆ ಭಾಗಕ್ಕೆ ಇದ್ದಿಲು ಮತ್ತು ತೆಂಗಿನೆಣ್ಣೆಯ ಮಿಶ್ರಣವನ್ನು ಹಚ್ಚಬೇಕು.