ಮೊಡವೆಗಳ ರಂಧ್ರಗಳು ಮುಚ್ಚಿ ಹೋದಾಗ ನಿಮ್ಮ ಚರ್ಮವು ಕಂದು ಅಥವಾ ಕಪ್ಪು ಬಣ್ಣ್ಕಕ್ಕೆ ತಿರುಗುತ್ತದೆ. ಇದಕ್ಕೆ ಬ್ಲ್ಯಾಕ್ ಹೆಡ್ಸ್ ಎನ್ನುತ್ತೇವೆ. ಇದು ಹೆಚ್ಚಾಗಿ ಮೂಗಿನ ಮೇಲೆ ಮೂಡುತ್ತದೆ. ಇದನ್ನು ಹೈಡ್ರೋಜನ್ ಪೆರಾಕ್ಸೈಡ್ ಬಳಸಿ ನಿವಾರಿಸಬಹುದು. ಅದು ಹೇಗೆ ಎಂಬುದನ್ನು ತಿಳಿಯೋಣ.
ಮೊದಲಿಗೆ ಹತ್ತಿಯ ಉಂಡೆಗಳನ್ನು ತೆಗೆದುಕೊಂಡು ಸ್ವಲ್ಪ ಹೈಡ್ರೋಜನ್ ಪೆರಾಕ್ಸೈಡ್ ನೊಂದಿಗೆ ಅದ್ದಿ ನಿಮ್ಮ ಬ್ಲ್ಯಾಕ್ ಹೆಡ್ಸ್ ಮೇಲೆ ರಬ್ ಮಾಡಿ, ಆದರೆ ಇದನ್ನು ನಿಮ್ಮ ಕೂದಲು ಮತ್ತು ಹುಬ್ಬಗಳಿಗೆ ಹಚ್ಚಬೇಡಿ.
ಬಳಿಕ ಮುಖ ವಾಶ್ ಮಾಡಿಕೊಂಡು ಆಲಿವ್ ಎಣ್ಣೆಯಿಂದ ಮುಖವನ್ನು ಮಸಾಜ್ ಮಾಡಿ. ಇದರಿಂದ ಚರ್ಮಕ್ಕೆ ಯಾವುದೇ ಹಾನಿಯಾಗುವುದಿಲ್ಲ ಮತ್ತು ಮೃದುವಾಗುತ್ತದೆ. ಆದರೆ ಇದನ್ನು ಹೆಚ್ಚಾಗಿ ಬಳಸಬೇಡಿ.