ಹೆರಿಗೆಯ ನಂತರ ದೇಹ ತೂಕ ಹೆಚ್ಚುವುದು ಸಹಜ ಕ್ರಿಯೆಗಳಲ್ಲಿ ಒಂದು. ಇದನ್ನು ನೈಸರ್ಗಿಕವಾಗಿ ಇಳಿಸುವ ಕೆಲವು ವಿಧಾನಗಳ ಬಗ್ಗೆ ತಿಳಿಯೋಣ ಬನ್ನಿ.
ಡಯಟ್ ಪಾಲಿಸಿ. ಮಗುವಿನ ಲಾಲನೆ ಪಾಲನೆಯಲ್ಲಿ ನಿಮಗೆ ನಿಯಮಿತವಾದ ಡಯಟ್ ಪಾಲನೆ ಮಾಡುವುದು ಕಷ್ಟವಾಗಬಹುದು. ಹಾಗಾದಾಗ ನಿತ್ಯ ಸೇವಿಸುವ ಆಹಾರದ ಪಟ್ಟಿಯನ್ನು ಅಡುಗೆ ಮನೆಯಲ್ಲಿ ತೂಗು ಹಾಕಿ. ಕ್ಯಾಲೊರಿ ಕಡಿಮೆ ಇರುವ ಆಹಾರಗಳನ್ನು ಸೇವಿಸುವ ಮೂಲಕ ದೇಹ ತೂಕ ಕಡಿಮೆ ಮಾಡಿ.
ಹಾಗೆಂದು ಏನೂ ತಿನ್ನದೇ ಹೋದರೆ ಮಗುವಿಗೆ ಎದೆಹಾಲು ಕಡಿಮೆಯಾದೀತು. ಅದನ್ನು ತಪ್ಪಿಸಲು ತಿನ್ನುವ ಪ್ರಮಾಣವನ್ನು ಕಡಿಮೆ ಮಾಡಿ. ಮೂರು ಬಾರಿ ಊಟ ಮಾಡುವ ಬದಲು ನಾಲ್ಕರಿಂದ ಐದು ಬಾರಿ ಊಟ ಮಾಡಿ. ಆದರೆ ಪ್ರಮಾಣ ಕಡಿಮೆಯಿರಲಿ.
ಬೆವರಿಳಿಸದೆ ಕೇವಲ ಮಸಾಜ್ ಮಾಡುವುದರಿಂದ ಹೊಟ್ಟೆಯ ಭಾಗದ ಕೊಬ್ಬನ್ನು ಕರಗಿಸಬಹುದು. ಅದು ಹೇಗೆಂದು ತಿಳಿಯಿರಿ. ಹಾಲು ಬೆರೆಸಿದ ಚಹಾ, ಕಾಫೀ ಕುಡಿಯುವ ಬದಲು ಗ್ರೀನ್ ಟೀ ಸೇವಿಸಿ. ಇದರಿಂದ ಕೊಬ್ಬು ಕಡಿಮೆಯಾಗಿ ಜೀರ್ಣಕ್ರಿಯೆಯೂ ಚುರುಕುಗೊಳ್ಳುತ್ತದೆ.
ಹೆರಿಗೆ ಬಳಿಕ ಓಮಕಾಳಿನ ನೀರು ಸೇವಿಸಿ. ಇದರಿಂದಲೂ ತೂಕ ಇಳಿಯುತ್ತದೆ. ಚಕ್ಕೆ ಪುಡಿ ನೀರಿನಲ್ಲಿ ಬೆರೆಸಿ ಕುದಿಸಿ ಕುಡಿದರೂ ನಿಮ್ಮ ತೂಕ ಕಡಿಮೆಯಾಗುತ್ತದೆ.