ಎಲೆಕೋಸು ಬಳಸಿ ತಯಾರಿಸುವ ಖಾದ್ಯ ಬಹಳ ರುಚಿ ಹಾಗೇ ಆರೋಗ್ಯಕರವೂ ಹೌದು. ಇದರಲ್ಲಿ ವಿಟಮಿನ್ ಎ, ಸಿ, ಇ, ಪೊಟ್ಯಾಶಿಯಂನಂತಹ ಪೋಷಕಾಂಶಗಳಿವೆ. ಇದನ್ನು ಚರ್ಮದ ಸೌಂದರ್ಯವನ್ನು ವೃದ್ಧಿಸಿಕೊಳ್ಳಲು ಕೂಡ ಬಳಸಬಹುದು. ಎಲೆಕೋಸು ಹೀಗೆ ಬಳಸಿದಲ್ಲಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ.
*ಹೊಳೆಯುವ ಚರ್ಮವನ್ನು ಪಡೆಯಲು 4 ಚಮಚ ಎಲೆಕೋಸು ಪೇಸ್ಟ್ ಗೆ 1 ಮೊಟ್ಟೆ, 1 ಚಮಚ ಜೇನುತುಪ್ಪ, 2 ಚಮಚ ಕಡಲೆ ಹಿಟ್ಟು, ನಿಂಬೆ ರಸ ½ ಚಮಚ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಮತ್ತು ಕುತ್ತಿಗೆಗೆ ಹಚ್ಚಿ 20 ನಿಮಿಷ ಬಿಟ್ಟು ತಣ್ಣೀರಿನಲ್ಲಿ ಮುಖವನ್ನು ವಾಶ್ ಮಾಡಿ. ಇದನ್ನು ವಾರದಲ್ಲಿ 2 ಬಾರಿ ಮಾಡಿ.
ತ್ವಚೆ ಸೌಂದರ್ಯ ಹೆಚ್ಚಿಸಲು ಈ ಟಿಪ್ಸ್ ಫಾಲೋ ಮಾಡಿ
*ಎಣ್ಣೆಯುಕ್ತ ಚರ್ಮವನ್ನು ನಿವಾರಿಸಲು 2 ಚಮಚ ಮೊಟ್ಟೆಯ ಬಿಳಿ ಲೋಳೆ, 1 ಚಮಚ ನಿಂಬೆ ರಸ, 4 ಚಮಚ ಎಲೆಕೋಸು ಪೇಸ್ಟ್ ಇವಿಷ್ಟನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಮತ್ತು ಕುತ್ತಿಗೆಗೆ ಹಚ್ಚಿ 15 ನಿಮಿಷ ಬಿಟ್ಟು ತಣ್ಣೀರಿನಲ್ಲಿ ಮುಖವನ್ನು ವಾಶ್ ಮಾಡಿ. ಇದನ್ನು ವಾರಕ್ಕೊಮ್ಮೆ ಮಾಡಿ.