ಹಲವು ಪೋಷಕಾಂಶಗಳ ಆಗರವಾಗಿರುವ ಆಲೂಗಡ್ಡೆಯ ಸೇವನೆಯಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಆಲೂಗಡ್ಡೆಯಿಂದ ಮೊಡವೆ, ಕಪ್ಪು ಕಲೆ ಗಳನ್ನು ಹೋಗಲಾಡಿಸಿ ಆಕರ್ಷಕ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಬಹುದು ಎಂಬುದು ನಿಮಗೆ ತಿಳಿದಿದೆಯೇ?
ವಿಪರೀತ ಆಯಾಸ ಮತ್ತು ಔಷಧಗಳ ಅಡ್ಡ ಪರಿಣಾಮದಿಂದ ಕಣ್ಣಿನ ಸುತ್ತ ಕಪ್ಪು ವೃತ್ತ ಕಾಣಿಸಿಕೊಂಡಿರಬಹುದು. ಇದನ್ನು ತೆಗೆಯಲು ಆಲೂಗಡ್ಡೆ ಸ್ಲೈಸ್ ಗಳನ್ನು ಕಣ್ಣ ಕೆಳಭಾಗಕ್ಕೆ ಇಟ್ಟು 20 ನಿಮಿಷ ಕಣ್ಣು ಮುಚ್ಚಿ ಮಲಗಿ. ಅಥವಾ ಆಲೂಗಡ್ಡೆ ಪೇಸ್ಟ್ ತಯಾರಿಸಿ ಹಚ್ಚಿ.
ಸೂರ್ಯನ ಶಾಖಕ್ಕೆ ತ್ವಚೆ ಕರಟಿ ಹೋಗಿದೆಯೇ, ಆಲೂಗಡ್ಡೆ ನಿಮ್ಮ ತ್ವಚೆಗೆ ಮತ್ತೆ ಆಕರ್ಷಣೆಯನ್ನು ತಂದುಕೊಡುತ್ತದೆ. ಸಿಪ್ಪೆ ತೆಗೆದ ಆಲೂಗಡ್ಡೆಯನ್ನು ಸ್ಲೈಸ್ ಮಾಡಿ ಮೃದುವಾಗಿ ಮಸಾಜ್ ಮಾಡಿ. ಕನಿಷ್ಠ 15 ನಿಮಿಷ ಹೀಗೆ ಮಾಡಿ. ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
ಇದರಲ್ಲಿ ಬ್ಲೀಚಿಂಗ್ ಗುಣವೂ ಇದ್ದು ಹೀಗೆ ಮಸಾಜ್ ಮಾಡಿದಾಗ ಸತ್ತ ಜೀವಕೋಶಗಳು ದೂರವಾಗುತ್ತದೆ. ಶುಷ್ಕ ತ್ವಚೆಗೆ ಜೀವ ಕೊಡುತ್ತದೆ. ಮೊಡವೆ ಮತ್ತು ಕಲೆಗಳನ್ನು ಹೋಗಲಾಡಿಸಿ ಜಿಡ್ಡಿನಂಶವನ್ನು ದೂರಮಾಡುತ್ತದೆ. ಸುಕ್ಕುಗಳನ್ನೂ ನಿವಾರಿಸುತ್ತದೆ.