ಸೀರೆ, ಡ್ರೆಸ್ ತೆಗೆದುಕೊಂಡು ಬರುವಾಗ ತುಂಬಾ ನೋಡಿ ಈ ಕಲರ್ ನನಗೆ ಒಪ್ಪುತ್ತದೆಯೋ, ಈ ಡ್ರೆಸ್ ಫಿಟ್ ಆಗುತ್ತದೆಯೋ ಎಂದು ಪರೀಕ್ಷಿಸಿ ತರುತ್ತೇವೆ. ಆದೇ ಬ್ರಾ ವಿಷಯಕ್ಕೆ ಬಂದಾಗ ತುಸು ಮುಜುಗರ ಜಾಸ್ತಿ. ಬಟ್ಟೆ ಅಂಗಡಿಯಲ್ಲಿ ಕೇಳುವುದು ಹೇಗೆ…? ಯಾವ ರೀತಿಯ ಬ್ರಾ ಆಯ್ಕೆ ಮಾಡಿಕೊಳ್ಳಬೇಕು ಎಂಬಿತ್ಯಾದಿ ಗೊಂದಲಗಳು ಇರುತ್ತದೆ.
ಈಗ ಶಾಪಿಂಗ್ ಮಾಲ್ ನಲ್ಲಿ, ಆನ್ ಲೈನ್ ನಲ್ಲಿ ನಿಮಗೆ ಬೇಕಾದ ರೀತಿಯ, ಸ್ಟೈಲ್ ನ ಬ್ರಾ ಸಿಗುತ್ತದೆ. ಇಷ್ಟೆಲ್ಲ ಇದ್ದರೂ ಕೆಲವೊಮ್ಮೆ ಬ್ರಾ ಆಯ್ಕೆ ಮಾಡಿಕೊಳ್ಳುವಾಗ ಎಡವುತ್ತೇವೆ. ಸರಿಯಾದ ಸೈಜ್ ನ ಬ್ರಾ ಆಯ್ಕೆ ಮಾಡಿಕೊಂಡರೆ ಮಾತ್ರ ನಿಮ್ಮ ಸೌಂದರ್ಯವೂ ಹೆಚ್ಚುತ್ತದೆ ಹಾಗೇ ಕಂಫರ್ಟ್ ಕೂಡ ಆಗಿರುತ್ತದೆ.
ನಿಮ್ಮ ʼಸೌಂದರ್ಯʼವನ್ನು ಹೆಚ್ಚಿಸುತ್ತೆ ಸೌತೆಕಾಯಿ
ಮೊದಲು ನಿಮ್ಮ ಎದೆಯ ಸುತ್ತಳತೆ ಎಷ್ಟು ಎಂಬುದನ್ನು ಪರೀಕ್ಷಿಸಿ ನಂತರ ಬ್ರಾ ತೆಗೆದುಕೊಳ್ಳಿ. ಅಂದಾಜಿನ ಮೇಲೆ ಯಾವುದೇ ಕಾರಣ್ಕಕೂ ಬ್ರಾ ತೆಗೆದುಕೊಳ್ಳಬೇಡಿ. ಸರಿಯಾದ ಸೈಜ್ ನ ಬ್ರಾ ಹಾಕಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು.
ಹಾಗೇ ನಿಮ್ಮ ಕಪ್ ಸೈಜ್ ಯಾವುದು ಎಂದು ತಿಳಿದುಕೊಳ್ಳಿ. ಅದಕ್ಕೆ ತಕ್ಕ ಹಾಗೇ ಬ್ರಾ ತೆಗೆದುಕೊಳ್ಳಿ. ಇನ್ನು ಆದಷ್ಟು ಮೆತ್ತಗಿನ , ಕಾಟನ್ ಬ್ರಾಗಳನ್ನೇ ಆರಿಸಿಕೊಳ್ಳಿ. ಜಿಮ್ ಗೆ ಹೋಗುವವರು, ಎಕ್ಸಸೈಜ್ ಮಾಡುವವರು ಆದಷ್ಟು ಸ್ಪೋರ್ಟ್ಸ್ ಬ್ರಾ ತೆಗೆದುಕೊಂಡರೆ ಒಳ್ಳೆಯದು.