ಹಣ್ಣುಗಳ ರಾಜ ಮಾವು ಮಾರುಕಟ್ಟೆಗೆ ಬಂದಾಯ್ತು. ಇನ್ನೇನಿದ್ದರೂ ರಾಜರದ್ದೇ ಕಾರುಬಾರು. ಮಾವಿನ ಹಣ್ಣು ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಅವುಗಳ ಬಗ್ಗೆ ತಿಳಿಯೋಣ.
ಈ ಹಣ್ಣು ಸೇವನೆಯಿಂದ ತ್ವಚೆಗೆ ಹೊಳಪು ಸಿಗುತ್ತದೆ ಹಾಗೂ ಕೂದಲು ಉದ್ದವಾಗಿ ಬೆಳೆಯುತ್ತದೆ. ಮುಖದ ಮೇಲೆ ಮೊಡವೆಯಾಗುತ್ತದೆ ಎಂಬ ಚಿಂತೆಯನ್ನೂ ಬಿಟ್ಟುಬಿಡಿ. ಸೇವಿಸುವ ಮೊದಲು 10 ನಿಮಿಷ ಕಾಲ ಹಣ್ಣನ್ನು ನೀರಿನಲ್ಲಿ ಹಾಕಿ ನೆನೆಸಿಡಿ.
ಇದರಲ್ಲಿ ರೋಗ ನಿರೋಧಕ ಶಕ್ತಿ ಮತ್ತು ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿದ್ದು, ನಾನಾ ಬಗೆಯ ಮಾರಕ ರೋಗಗಳ ವಿರುದ್ದ ಹೋರಾಡಲು ದೇಹವನ್ನು ಸಜ್ಜುಗೊಳಿಸುತ್ತದೆ.
ಇದರಲ್ಲಿರುವ ಪೊಟಾಷಿಯಂ ಲವಣಾಂಶಗಳು ಹೃದಯ ಸಂಬಂಧಿ ಕಾಯಿಲೆಗಳನ್ನು ನಿಯಂತ್ರಸಲು ನೆರವಾಗುತ್ತದೆ. ಹಾಗಿದ್ದರೆ ತಡ ಏಕೆ, ಇಂದೇ ಮಾವು ತನ್ನಿ, ತಿಂದು ಆರೋಗ್ಯವಂತರಾಗಿ.